ಬೆಂಗಳೂರು,ಸೆಪ್ಟಂಬರ್,23,2020(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು ಕೊರೋನಾ ನಿರ್ವಹಣೆ ರೈತವಿರೋಧಿ ಕಾಯ್ದೆ ಕುರಿತು ಚರ್ಚೆ ನಡೆಸಲಾಗುತ್ತಿದೆ. ಈ ನಡುವೆ ಮುಂದಿನ 4 ದಿನಗಳಲ್ಲಿ ಸದನದಲ್ಲಿ ನಮ್ಮ ಚಟುವಟಿಕೆಗಳು ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಸಮಯ ಕಡಿಮೆ ಇದೆ. ಜನ ವಿರೋಧಿ ಕಾಯ್ದೆಗಳ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಡಿಎಲ್ ಪಿ ಸಭೆಯ ಬಳಿಕ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ H.D.ಕುಮಾರಸ್ವಾಮಿ, ಕೊರೋನಾ ಸೆನ್ಸಿಟಿವ್ ವಿಷಯ. ಜನ, ಜನ ಪ್ರತಿನಿಧಿಗಳ ಆರೋಗ್ಯ ಮುಖ್ಯ ಸದನದಲ್ಲಿ ಜನ ವಿರೋಧಿ ಕಾಯ್ದೆಗಳ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಿನ್ನೆ ಕೊರೋನಾ ಬಗ್ಗೆ ಚರ್ಚೆ ಮಾಡಿ ಏನು ಸಾಧನೆ ಮಾಡಿದ್ರಿ?. ದೊಡ್ಠ ಮಟ್ಟದ ಪ್ರಚಾರ ತೆಗೆದುಕೊಂಡ್ರಿ. ನಿನ್ನೆ ಕಲಾಪದಲ್ಲಿ ನಾನು ಭಾಗವಹಿಸಿದ್ರೂ ಒಂದೇ , ಭಾಗವಹಿಸದಿದ್ರೂ ಒಂದೇ ಎಂದು ಟೀಕಿಸಿದರು.
ಸದನ ಮೊಟಕುಗೊಳಿಸುವ ವಿಚಾರ. ಎಲ್ಲರ ಅಭಿಪ್ರಾಯ ಆಧರಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಚರ್ಚೆ ಇಲ್ಲದೆ ಎಲ್ಲಾ ಬಿಲ್ ಗಳನ್ನು ಪಾಸ್ ಮಾಡಲಾಗ್ತಿದೆ. ಸಂಸತ್ತಿನಲ್ಲೂ ಈ ರೀತಿ ಆಗ್ತಿದೆ. ಜನ ಪ್ರತಿನಿಧಿಗಳು, ರೈತ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಸರ್ಕಾರ 1600 ಕೋಟಿ ರೂ. ಕೋರೋನ ಪ್ಯಾಕೇಜ್ ಘೋಷಣೆ ಮಾಡಿದ್ದು, ಈಗ ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ, ಇಂದಿನ ಎಪಿಎಂಸಿ ಕಾಯ್ದೆ ಚರ್ಚೆಯಲ್ಲಿ ಭಾಗಿಯಾಗುವೆ. ಸಾಧಕ ಬಾಧಕಗಳ ಚರ್ಚೆ ಆಗಬೇಕು. ಬಿಹಾರದಲ್ಲಿ ಈ ಕಾಯ್ದೆ ವಾಪಸ್ ಪಡೆಯಲಾಗಿದೆ. ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ತರಬೇಕಿತ್ತಾ?6 ತಿಂಗಳು ಮುಂದೂಡಿದ್ರೆ ಏನಾಗುತ್ತಿತ್ತು…? ಎಂದು ಹೆಚ್.ಡಿಕೆ ಪ್ರಶ್ನಿಸಿದ್ದಾರೆ.
Key words: discuss -yesterday – Corona- Former CM-HD Kumaraswamy- questioned- Congress.