ತುಮಕೂರು,ಅಕ್ಟೋಬರ್,23,2021(www.justkannada.in): ಈಗಾಗಲೇ ಹೆಚ್.ಡಿ ದೇವೇಗೌಡರು ಹೆಚ್.ಡಿ ಕುಮಾರಸ್ವಾಮಿ ಜತೆ ಚರ್ಚೆ ಮುಗಿದಿದೆ. ವೈಯಕ್ತಿಕವಾಗಿ ಮಾತನಾಡುವುದು ಮುಗಿದು ಹೋಗಿದೆ. ಅ.25ರ ನಂತರ ನನ್ನ ನಿರ್ಧಾರ ಏನೆಂದು ತಿಳಿಸುತ್ತೇನೆ. ಕಾರ್ಯಕರ್ತರು, ಬೆಂಬಲಿಗರ ಸಭೆ ಬಳಿಕ ನಿರ್ಧಾರ ತಿಳಿಸುತ್ತೇನೆ ಎಂದು ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.
ಮಾಧ್ಯಗಳ ಜತೆ ಇಂದು ಮಾತನಾಡಿದ ಶಾಸಕ ಎಸ್.ಆರ್ ಶ್ರೀನಿವಾಸ್, ನಾನು ಜೆಡಿಎಸ್ ನಲ್ಲೇ ಇರಬೇಕೆಂದು ಅಂದುಕೊಂಡಿದ್ದೆ. ಆದರೆ ಅವರು ಆ ಹಂತ ಮೀರಿ ಮುಂದೆ ಹೋಗಿದ್ದಾರೆ. ಇದೆಲ್ಲಾ ನಾವಾಗಿ ಮಾಡಿಕೊಂಡಿರುವುದಲ್ಲ. ನಾನು ಮುಕ್ತವಾಗಿದ್ದೆ, ಯಾವಾಗ ಕರೆದರು ನಾನು ಹೋಗುತ್ತಿದ್ದೆ ಎಂದು ಹೇಳಿದ್ದಾರೆ.
ಗುಬ್ಬಿಯಲ್ಲಿ ನಡೆಯುವ ಕಾರ್ಯಕ್ರಮ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹೋಗಲ್ಲ, ನಮ್ಮ ಕಾರ್ಯಕರ್ತರೂ ಹೋಗಲ್ಲ. ಯಾವ ವರಿಷ್ಠರು ಬರುತ್ತಾರೆ ಅನ್ನೋದು ಮುಖ್ಯವಲ್ಲ. ನಮಗೂ ಆತ್ಮಗೌರವ, ಸ್ವಾಭಿಮಾನ ಅನ್ನೋದು ಇದೆ. ಸ್ವಾಭಿಮಾನ ಮಾರಿಕೊಂಡು ಪಕ್ಷದಲ್ಲಿರಬೇಕು ಅಂತಿಲ್ಲ ಯಾರು ಬಂದ್ರು ಅಷ್ಟೇ, ಅವರ ನಡವಳಿಕೆ ಸರಿ ಇರಬೇಕು. ಅವರೊಬ್ಬರಿಗೆ ಗೌರವ ಅಲ್ಲ, ಎಲ್ಲರಿಗೂ ಗೌರವ ಇರುತ್ತೆ ಎಂದು ಶಾಸಕ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Key words: discussion – HD Devegowda- HD Kumaraswamy -My decision -after -25th-JDS -MLA
ENGLISH SUMMARY…
Discussion with HDD and HDK is completed: I will reveal my decision after Oct. 25-JDS MLA
Tumakuru, October 23, 2021 (www.justkannada.in): JDS MLA S.R. Srinivas has informed that he has already finished the discussion with JDS supremo H.D. Devegowda and former Chief Minister H.D. Kumaraswamy, and he will disclose his decision after October 25.
“I have finished the discussion with the leaders personally. I will inform my decision after discussing it with the party workers and supporters,” he said.
He spoke to the media persons today. “I had thought of remaining in the JDS. But they crossed the limits. This is not a self-committed mistake. I was open to discussing. I was ready to meet them and discuss anytime,” he added.
“I don’t know about the program to be held in Gubbi. I won’t go, my supporters also won’t go. It is not important which leaders will participate in that program. We also have self-respect. I can’t stay at the party leaving my self-esteem. Whoever it is, behavior is important,” he said.
Keywords: S.R. Srinivas/ Tumakuru/ JDS