ಬೆಂಗಳೂರು,ಜನವರಿ,14,2021(www.justkann.in): ನಿನ್ನೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು 7 ಮಂದಿ ಶಾಸಕರು ಸಿಎಂ ಬಿಎಸ್ ವೈ ಸಂಪುಟ ಸೇರ್ಪಡೆಯಾಗಿದ್ದಾರೆ. ಈ ಮಧ್ಯೆ ಶಾಸಕರ ಅಸಮಾಧಾನ ಸ್ಫೋಟಗೊಂಡಿದ್ದು ಈ ಕುರಿತು ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಅಸಮಾಧಾನವಿರುವ ಶಾಸಕರು ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಲಿ ಎಂದು ಹೇಳಿದ್ದಾರೆ.
ಶಾಸಕರ ಅಸಮಾಧಾನ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾವ ಶಾಸಕರಿಗೆ ಅಸಮಾಧಾನ ಇದೆಯೋ ಅಂತವರು ದೆಹಲಿಗೆ ಹೋಗಿ ವರಿಷ್ಟರಿಗೆ ದೂರು ನೀಡಲಿ ನನ್ನ ಅಭ್ಯಂತರವಿಲ್ಲ. ಮನಸ್ಸಿಗೆ ಬಂದಂತೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ. ಏನೇ ಬೆಳವಣಿಗೆಯಾದರೂ ಪಕ್ಷದ ವರಿಷ್ಟರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಪಕ್ಷದ ವರಿಷ್ಟರಿಗೆ ಯಾವುದು ಸರಿ ತಪ್ಪು ಎಂಬುದು ತಿಳಿದಿದೆ. ನಮ್ಮ ಶಾಸಕರು ವಿನಾಕಾರಣ ಹೇಳಿಕೆ ನೀಡುವ ಬದಲು ವರಿಷ್ಟರಿಗೆ ದೂರು ನೀಡಲಿ. ಪಕ್ಷದ ವರ್ಚಸ್ಸು ಕುಂದಿಸುವ ಕೆಲಸವನ್ನು ಯಾರೂ ಮಾಡದಂತೆ ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
English summary……
“MLAs who are upset can go to Delhi and complain to the high command: CM BSY
Bengaluru, Jan. 14, 2021 (www.justkannada.in): The cabinet has been expanded, and 7 new ministers are included in Chief Minister B.S. Yeddyurappa’s cabinet. Displeasure among BJP MLAs has exploded following this, following which Yeddyurappa has asked the disgruntled MLAs to go to Delhi and give a complaint to the party high command.
Speaking about the disgruntled MLAs in Bengaluru, CM Yeddyurappa said, “let them go to Delhi and complain to the party leaders, I don’t have any objection. But please don’t speak as you wish and bring a bad name to the party. The party leaders will take measures whatever developments take place.”
“Our party leaders know what is correct and what is wrong. Instead of talking as they wish, let our party MLAs complain to them. I request all not to malign our party,” he added.
Keywords: CM B.S. Yeddyurappa/ BJP national leaders/ complain/ disgruntled MLAs
Key words: disgruntled –MLA- Delhi – complain- High Command-. CM BS Yeddyurappa.