ಬೆಂಗಳೂರು,ಜು,17,2019(www.justkannada.in): ಬೇರೆಯವರನ್ನ ನಂಬಿ ಹೋಗಬೇಡಿ ಅವರು ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆಯಾದ್ರೆ ನೀವು ಮತ್ತೆ ಸಚಿವರಾಗಲು ಆಗಲ್ಲ. ಹೀಗಾಗಿ ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ ಎಂದು ಅತೃಪ್ತ ಶಾಸಕರಿಗೆ ಸಚಿವ ಡಿ.ಕೆ ಶಿವಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಕುರಿತು ಇಂದು ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್, ಸುಪ್ರೀಂಕೋರ್ಟ್ ತೀರ್ಪನ್ನ ಸ್ವಾಗತಿಸುತ್ತೇನೆ. ಇಂದಿನ ತೀರ್ಪು ಸ್ಪೀಕರ್ ಅಧಿಕಾರವನ್ನ ಎತ್ತಿಹಿಡಿದಿದೆ. ಹಾಗೆಯೇ ಸದನಕ್ಕೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ಒತ್ತಡ ಹೇರುವಂತೆ ಹೇಳಿದೆ. ಶಾಸಕರು ಅಧಿವೇಶನಕ್ಕೆ ಬರಬಹುದು ಅಥವಾ ಬರದೆ ಇರಬಹುದು. ಆದ್ರೆ ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲಾ ಎಂದರು.
ಎಲ್ಲಾ ಶಾಸಕರು ನನ್ನ ಪಾಲಿಗೆ ರೆಬಲ್ ಶಾಸಕರಲ್ಲ ಸ್ನೇಹಿತರು. ಹೀಗಾಗಿ ಮತ್ತೊಮ್ಮೆ ಎಲ್ಲಾ ಅತೃಪ್ತ ಶಾಸಕರಿಗೆ ಮನವಿ ಮಾಡುತ್ತೇನೆ. ಬೇರೆಯವರನ್ನ ನಂಬಿ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ನೀವು ಅನರ್ಹತೆಯಾದರೇ ಮತ್ತೆ ಸಚಿವರಾಗಲು ಆಗಲ್ಲ ಅಲ್ವಾ. ಹೀಗಾಗಿ ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ ನಿನ್ನ ಕುಟುಂಬ ಮತ್ತು ನಿಮ್ಮನ್ನ ಗೆಲ್ಲಿಸಿದ ಮತದಾರರ ಮುಖ ನೋಡಿ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
Key words: disqualification- DK Sivakumar-last chance – Rebel MLAs