ನವದೆಹಲಿ,ಅ,22,2019(www.justkannada.in): ಶಾಸಕ ಸ್ಥಾನ ಅನರ್ಹಗೊಳಿಸಿದ ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.
ಶಾಸಕ ಸ್ಥಾನದಿಂದ ಅನರ್ಹ ಗೊಳಿಸಿ ಹಿಂದಿನ ಸ್ಪೀಕರ್ ನೀಡಿದ್ದ ತೀರ್ಪನ್ನ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ನ್ಯಾಯಮೂರ್ತಿ ಎನ್. ವಿ ರಮಣಿ ನ್ಯಾಯಪೀಠದಿಂದ ಅರ್ಜಿ ವಿಚಾರಣೆ ನಡೆಯಲಿದೆ.
ಅರ್ಜಿ ಕುರಿತ ವಿಚಾರಣೆ ಒಂದು ವಾರ ಮುಂದೂಡುವಂತೆ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ನಿನ್ನೆ ಮನವಿ ಮಾಡಿದ್ದರು. ಆದರೆ ಸುಪ್ರೀಂಕೋರ್ಟ್ ವಾರ ಸಮಯ ನೀಡಲು ಆಗದು ಒಂದು ದಿನ ಅವಕಾಶ ಕೊಡಬಹುದು ಎಂದು ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು.
ಈ ಮಧ್ಯೆ ಚುನಾವಣಾ ಆಯೋಗದ ಪರ ವಕೀರರು ಉಪ ಚುನಾವಣೆ ದಿನಾಂಕ ಘೋಷಿಸಿರುವುದರಿಂದ ಬೇಗನೆ ಇತ್ಯರ್ಥ ಪಡಿಸಿ ಎಂದು ಕೋರ್ಟ್ ಗೆ ಮನವಿ ಮಾಡಿದರು. ಹೀಗಾಗಿ, ಮಂಗಳವಾರವೇ ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಚುನಾವಣೆ ಮುಂದೂಡಿ ಎಂದು ಸಲ್ಲಿಸಿದ್ದ ಅರ್ಜಿಯೂ ಇಂದು ವಿಚಾರಣೆ ನಡೆಯಲಿದೆ.
ಇಂದು ಶಾಸಕ ಸ್ಥಾನದ ಅನರ್ಹತೆ ಬಗ್ಗೆ , ತೀರ್ಪು ಪ್ರಕಟವಾದ್ರೆ ಇತ್ತ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ. ತೀರ್ಪು ಪ್ರಕಟವಾದ ನಂತರ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಇಂದಿನ ತೀರ್ಪು ಮಹತ್ವ ಪಡೆದುಕೊಂಡಿದೆ. ತೀರ್ಪು ಹೊರ ಬರುತ್ತಿದ್ದಂತೆ ರಾಜಕೀಯ ಮೇಲಾಟಗಳು ಶುರುವಾಗಲಿವೆ.
Key words: disqualified MLA hearing Supreme Court today.