ಬೆಂಗಳೂರು,ಅ,28,2019(www.justkannada.in): ಬಿಜೆಪಿ ಸೇರುವುದಾಗಿ ಅನರ್ಹ ಶಾಸಕರ ಎಂ.ಟಿಬಿ ನಾಗರಾಜ್ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡರನ್ನ ಮನವೊಲಿಸುವಂತೆ ಮನವಿ ಮಾಡಿದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಪ್ರಚಾರ ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಶರತ್ ಬಚ್ಚೇಗೌಡಗೆ ಬುದ್ದಿ ಹೇಳುವಂತೆ ಮನವಿ ಮಾಡಿದರು.
ಸಿಎಂ ಬಿಎಸ್ ವೈ ಭೇಟಿ ಬಳಿಕ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಪಕ್ಷೇತರರಾಗಿ ನಿಲ್ಲೋದಾಗಿ ಹೇಳ್ಕೊಂಡಿದ್ದಾರೆ. ಅವ್ರು ಈಗಾಗಲೇ ಮನೆಮನೆ ಪ್ರಚಾರ ಮಾಡ್ತಿದ್ದಾರೆ. ಪ್ರಚಾರ ಮಾಡಿಕೊಳ್ಳಲಿ ಅದಕ್ಕೂ ನನಗೂ ಸಂಬಂಧ ಇಲ್ಲ. ನಾನು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಬಿಜೆಪಿ ಸೇರ್ಪಡೆ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡ ಎಂಟಿಬಿ ನಾಗರಾಜ್,
ಬಿಜೆಪಿ ಸೇರ್ತೇವೆ ಎಂಬ ಎಚ್. ವಿಶ್ವನಾಥ್ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ ನಾಗರಾಜ್, ವಿಶ್ವನಾಥ್ ನಿಜವನ್ನೇ ಹೇಳಿದ್ದಾರೆ. ನಾವು ಬಿಜೆಪಿ ಸೇರೋದು ಎಲ್ಲರಿಗೂ ಗೊತ್ತಿಲ್ಲ. ಅದು ಈಗಾಗಲೇ ಲೋಕಾರೂಢಿಯಾಗಿರುವ ಸತ್ಯ. ನಾವು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಸೇರುವುದಾಗಿ ಬಹಿರಂಗಾವಾಗಿ ಒಪ್ಪಿಕೊಂಡರು.
ಟಿಪ್ಪುಜಯಂತಿ ಕುರಿತು ಸಿಎಂ ಇಬ್ರಾಹೀಂ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ಕಾಂಗ್ರೆಸ್ ನಲ್ಲಿ ಈಗ ಮೂರು ಗುಂಪುಗಳಾಗಿವೆ. ಮೂಲ ಗುಂಪು, ಸಿದ್ದರಾಮಯ್ಯ ಗುಂಪು ಮತ್ತು ಪರಮೇಶ್ವರ್ ಗುಂಪು. ಈ ಥರ ಗುಂಪುಗಾರಿಕೆ ಮಾಡಿಯೇ ಲೋಕಸಭೆಯಲ್ಲಿ ಒಂದೇ ಒಂದು ಸೀಟು ಗೆದ್ದಿದ್ದು ತಾನೇ? ಈಗ ಡಿಕೆಶಿ ಕೂಡಾ ಬಂದಿದಾರಲ್ಲ. ಹಾಗಾಗಿ ಇಬ್ರಾಹೀಂ ಹಾಗೆ ಹೇಳರಬಹುದು ಎಂದು ಲೇವಡಿ ಮಾಡಿದರು.
Key words: disqualified MLA- MTB Nagaraj- BJP-join-cm bs yeddyurappa