ಮೈಸೂರು,ಆ,3,2019(www.justkannada.in): ಅನರ್ಹ ಶಾಸಕರಿಗೆ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಸ್.ಎ ರಾಮದಾಸ್ , ಅವರ್ಯಾರೂ ಸ್ಥಾನಮಾನಕ್ಕೆ ಬೇಡಿಕೆ ಇಟ್ಟು ಬಂದಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಮೈತ್ರಿ ಸರ್ಕಾರವನ್ನು ಬೀಳಿಸುವ ಉದ್ದೇಶದಿಂದಲೇ ಅನರ್ಹ ಶಾಸಕರು ಹೊರಗೆ ಬಂದಿದ್ದಾರೆ. ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ. ರಾಷ್ಟ್ರೀಯ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ವಾರದೊಳಗೆ ರಾಜ್ಯ ಸಂಪುಟ ರಚನೆ ಆಗಲಿದೆ. ಸಿಎಂ ಯಡಿಯೂರಪ್ಪ ಅವರು ಶೀಘ್ರದಲ್ಲೇ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಬೇಕಿದೆ. ಲೋಕಸಭಾ ಅಧಿವೇಶನ ನಡೆಯುತ್ತಿರುವುದರಿಂದ ಹೈಕಮಾಂಡ್ ಭೇಟಿ ವಿಳಂಬವಾಗಿದೆ. ಸಂಸದರಿಗೆ ಎರಡು ದಿನಗಳ ತರಬೇತಿ ಇದೆ. ಇದೆಲ್ಲವೂ ಮುಗಿದ ಕೂಡಲೇ ಸಚಿವ ಸಂಪುಟ ರಚನೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.
ಮಕ್ಕಳೊಂದಿಗೆ ಶಾಸಕ ಎಸ್.ಎ.ರಾಮದಾಸ್ ಸಂವಾದ ಕಾರ್ಯಕ್ರಮ..
ಶಾಸಕ ಎಸ್.ಎ.ರಾಮದಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮೈಸೂರಿನ ಕನಕಗಿರಿಯಲ್ಲಿರುವ ಶಾಲೆಯಲ್ಲಿ ಮಕ್ಕಳ ಜತೆ ಸಂವಾದ ನಡೆಸಿದರು. ಇತಿಹಾಸ ಪುರುಷರ ಬಗ್ಗೆ ಅರಿತುಕೊಳ್ಳುವಂತೆ ಸಲಹೆ ನೀಡಿ ಸಾಮಾನ್ಯ ಜ್ಞಾನದ ಬಗ್ಗೆ ಕಿವಿಮಾತು ಹೇಳಿದರು. ಜತೆಗೆ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸುವಂತೆ ಶಾಸಕ ರಾಮದಾಸ್ ಕರೆ ನೀಡಿದರು.
Key words: disqualified mla- Status-our responsibility- BJP MLA -SA Ramdas.