ಬೆಂಗಳೂರು,ಜು,17,2019(www.justkannada.in) ಅತೃಪ್ತ ಶಾಸಕರು ಅನರ್ಹತೆಗೊಂಡರೇ ಬಿಜೆಪಿಗೆ ಅತ್ಯಂತ ಹೆಚ್ಚು ಲಾಭವಾಗಲಿದೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ದಿನೇಶ್ ಅಮಿನ್ ಮಟ್ಟು ಸಿಎಂ ಮಾಧ್ಯಮ ಸಲಹೆಗಾರರಾಗಿದ್ದರು. ಅತೃಪ್ತ ಶಾಸಕರ ಅನರ್ಹತೆಯಿಂದ ಬಿಜೆಪಿಗೆ ಹೇಹೆ ಹೆಚ್ಚು ಲಾಭವಾಗುತ್ತದೆ ಎಂಬುದನ್ನ ದಿನೇಶ್ ಅಮಿನ್ ಮಟ್ಟು ತಿಳಿಸಿದ್ದಾರೆ.
ಅತೃಪ್ತ ಶಾಸಕರ ಅನರ್ಹತೆಯಿಂದ
- ಸದನದ ಬಲ 209ಕ್ಕೆ ಕುಸಿದು ಬಿಜೆಪಿಗೆ ಸುಲಭದಲ್ಲಿ ಬಹುಮತ ಸಿಗಲಿದೆ.
- ಅತೃಪ್ತ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕಷ್ಟ ಇರುವುದಿಲ್ಲ.
- ಗೆದ್ದರೆ ಸಚಿವರಾಗಿ ಮಾಡಬೇಕೆಂಬ ಒತ್ತಡದ ಸಂಕಷ್ಟವೂ ಇಲ್ಲ.
ಇದರಿಂದ
- ಕೈಕೊಟ್ಟ ಶಾಸಕರಿಗೆ ಶಿಕ್ಷೆಯಾಯಿತೆಂಬ ಸಮಾಧಾನ ಕಾಂಗ್ರೆಸ್ ಪಕ್ಷಕ್ಕೆ.
- ವಿಶ್ವಾಸ ದ್ರೋಹ ಮಾಡಿದವರಿಗೆ ಶಿಕ್ಷೆಯಾಯಿತೆಂಬ ಸಮಾಧಾನ ಮತದಾರರಿಗೆ .
ಈ ಹಿನ್ನೆಲೆಯಲ್ಲಿ ಶಾಸಕರ ಅನರ್ಹತೆಗಾಗಿ ಬಹಿರಂಗವಾಗಿಯೋ, ರಹಸ್ಯವಾಗಿಯೋ ಬಿಜೆಪಿ ನಾಯಕರು ಸಹಕರಿಸಬೇಕು. ಇಂತಹ ಪ್ರಯತ್ನವನ್ನು ಬಿಜೆಪಿ ಮಾಡಿದರೆ ಈ ಒಂದು ಕಾರಣಕ್ಕಾಗಿ ಆ ಪಕ್ಷವನ್ನು ನಾನು ಅಭಿನಂದಿಸುತ್ತೇನೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
Key words: Dissatisfied MLA-disqualification- Profit –BJP-Dinesh Amin Madhu