ಬೆಂಗಳೂರು,ಜೂನ್,4,2022(www.justkannada.in): ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ ಮಾಡಿದ್ದೇವೆ ಅಷ್ಟೆ, ರದ್ಧು ಮಾಡಿಲ್ಲ. ಪಠ್ಯದಿಂದ ಹೆಡ್ಗೆವಾರ್ ಭಾಷಣ ಕೈಬಿಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ. ಪರಿಷ್ಕರಣಾ ಸಮಿತಿ ಕೆಲಸ ಮುಗಿದ ಹಿನ್ನೆಲೆ ಸಮಿತಿ ವಿಸರ್ಜನೆ ಮಾಡಿದ್ದೇವೆ. . ನಮ್ಮದು ಬಸವಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ ಎಂದರು.
ಪಠ್ಯದಲ್ಲಿ ಬಸವಣ್ಣನವರ ಒಂದು ಲೈನ್ ವ್ಯತ್ಯಾಸವಾಗಿದೆ. ಬಸವಣ್ಣನವರ ಪಠ್ಯದಲ್ಲಿನ ವ್ಯತ್ಯಾಸ ಸರಿಪಡಿಸುತ್ತೇವೆ. ಪಠ್ಯದಿಂದ ಹೆಗಡೆವಾರ್ ಭಾಷಣ ಕೈಬಿಡಲ್ಲ. ಶೀಘ್ರದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
Key words: dissolution – textbook -revision –committee-CM-Bommai