ಮೈಸೂರು,ಜನವರಿ,12,2021(www.justkannada.in): ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನ ಕೇಂದ್ರ ಸರ್ಕಾರ ಖರೀದಿಸಿ ಎಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದು, ಈ ಮಧ್ಯೆ ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 7.95 ಲಕ್ಷ ವೈಲ್ ಗಳು ಪೊರೈಕೆಯಾಗುತ್ತಿದೆ.
ಈ ಪೈಕಿ ಸದ್ಯ 6 ಲಕ್ಷ 47 ಸಾವಿರದ 500 ಡೋಸ್ ಲಸಿಕೆ ಬೆಂಗಳೂರಿಗೆ ಆಗಮಿಸಿದ್ದು, ಉಳಿದ ಲಸಿಕೆ ನಾಳೆ ಬೆಳಗಾವಿಗೆ ರವಾನೆಯಾಗಲಿದೆ. ನಂತರ ಕೊವೀಡ್ ಲಸಿಕೆ ವಿತರಣೆ ಅಭಿಯಾನ ಜನವರಿ 16 ರಿಂದ ಆರಂಭವಾಗಲಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತದೆ.
ಈ ಮಧ್ಯೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 234 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರು ಜಿಲ್ಲೆ ಲಸಿಕೆ ಕುರಿತ ಮಾಹಿತಿ ಇಲ್ಲಿದೆ ನೋಡಿ….
ಮೈಸೂರು ಜಿಲ್ಲೆಯಲ್ಲಿ ಒಟ್ಟು ಸಿರಿಂಜ್ ಶೇಖರಣೆ – 70,000
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುವವರ ಸಂಖ್ಯೆ – 33,009.
ಈ ಪೈಕಿ ಸರ್ಕಾರಿ ಆರೋಗ್ಯ ಕಾರ್ಯಕರ್ತರು ಸಂಖ್ಯೆ – 14,976
ಖಾಸಗಿ ಆರೋಗ್ಯ ಕಾರ್ಯಕರ್ತರು ಸಂಖ್ಯೆ – 18,033
ಸರ್ಕಾರಿ ನೌಕರರು ಸಂಖ್ಯೆ – ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ವಿತರಣೆ
ಜಿಲ್ಲೆಯಲ್ಲಿ ಒಟ್ಟು ಕೇಂದ್ರಗಳಲ್ಲಿ ಲಸಿಕೆ ವಿತರಣೆ – 234
ಸರ್ಕಾರಿ ಲಸಿಕಾ ಕೇಂದ್ರಗಳು – 162
ಖಾಸಗಿ ಲಸಿಕಾ ಕೇಂದ್ರಗಳು – 72 (26 ಸಂಸ್ಥೆಗಳು)
Key words: Distribution – covid Vaccine -234 Centers – Mysore District.