ಮೈಸೂರು,ಸೆಪ್ಟಂಬರ್,24,2020(www.justkannada.in): ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮವು ‘ಹಚ್ಚ ಹಸಿರ ಮೈಸೂರು’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನ ವಿತರಿಸಲು ಮುಂದಾಗಿದೆ.
ಸೆಪ್ಟಂಬರ್ 27 ರಿಂದ ನವೆಂಬರ್ ತಿಂಗಳವರೆಗೆ ಸಾರ್ವಜನಿಕರಿಗೆ ಉಚಿತವಾಗಿ 25 ಸಾವಿರಕ್ಕಿಂತಲೂ ಹೆಚ್ಚು ಸಸಿಗಳನ್ನ ವಿತರಲಿಸುವ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಿಗ್ಗೆ 10ರಿಂದ 12 ಗಂಟೆ ಹಾಗೆಯೇ ಮಧ್ಯಾಹ್ನ 3 ರಿಂದ 5.30ರವರೆಗೆ ಸಸಿಗಳನ್ನ ವಿತರಿಸಲಾಗುತ್ತದೆ. ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮ, ಶ್ರೀರಾಮಕೃಷ್ಣ ವಿದ್ಯಾಶಾಲಾ, ವಿವೇಕಸ್ಮಾರಕ ನಾರಾಯಣಶಾಸ್ತ್ರಿ ರಸ್ತೆ ಮೈಸೂರು, ರಾಮಕೃಷ್ಣ ವಿದ್ಯಾಕೇಂದ್ರ ರಾಮಕೃಷ್ಣ ನಗರ ಮೈಸೂರು ಇಲ್ಲಿ ಸಸಿಗಳನ್ನ ಪಡೆಯಬಹುದಾಗಿದೆ.
ಹಾಗೆಯೇ ಹಚ್ಚ ಹಸಿರ ಮೈಸೂರು ಕಾರ್ಯಕ್ರಮದಲ್ಲಿ ವಿವೇಕಪ್ರಭೆಯ ಮೈಸೂರು ಅಡಿಯಲ್ಲಿ ವಿವೇಕ ಪ್ರಭಾ ಮಾಸಪತ್ರಿಕೆ ವಿತರಿಸಲಾಗುತ್ತದೆ. ಶ್ರೀರಾಮಕೃಷ್ಣರ, ಶ್ರೀಶಾರಾದದೇವಿಯವರ ಮತ್ತು ಸ್ವಾಮಿ ವಿವೇಕನಂದರ ಜೀವನ ಸಂದೇಶವನ್ನೊಳಗೊಂಡ ಸ್ಪೂರ್ತಿ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಸ್ವಾಮಿ ಮುಕ್ತಿದಾನಂದ ಅವರು ತಿಳಿಸಿದ್ದಾರೆ.
Key words: Distribution – free – Saplings – Mysore -Sri Ramakrishna Ashram- Sep.27.