ನವದೆಹಲಿ,ಮೇ,22,2021(www.justkannada.in) ಕೊರೋನಾ ಭೀತಿ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಎಂಬ ರೋಗ ಜನರನ್ನ ಕಾಡಲು ಶುರುಮಾಡಿದ್ದು, ಈ ನಡುವೆ ಇದರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಇಂಜೆಕ್ಷನ್ ಹಂಚಿಕೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, .ಕರ್ನಾಟಕಕ್ಕೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಆಂಪೊಟೆರಿಸಿನ್ ಬಿ 1270 ವಯಲ್ ಹಂಚಿಕೆ ಮಾಡಲಾಗಿದೆ. ಗುಜರಾತ್ ಗೆ 5,500, ಮಹಾರಾಷ್ಟಕ್ಕೆ 5090, ಆಂಧ್ರ ಪ್ರದೇಶಕ್ಕೆ 2310 ವಯಲ್ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.
ದೇಶಾದ್ಯಂತ 8840 ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಕರ್ನಾಟಕದಲ್ಲಿ 500 ಬ್ಲ್ಯಾಕ್ ಫಂಗಸ್ ಇದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ದೇಶದ ವಿವಿಧ ರಾಜ್ಯಗಳಿಗೆ 23,680 ವಯಲ್ ಗಳನ್ನ ಹಂಚಿಕೆ ಮಾಡಲಾಗಿದೆ ಎಂದು ಡಿ.ವಿ ಸದಾನಂದ ಗೌಡರು ಮಾಹಿತಿ ನೀಡಿದ್ದಾರೆ.
Key words: Distribution -injection – black fungus – center -state.