ಮೈಸೂರು,ಜೂನ್,16,2021(www.justkannada.in): ಮೈಸೂರಿನ ಮಂಡಕಳ್ಳಿ ಕೂವಿಡ್ ಕೇಂದ್ರದಲ್ಲಿ ಕೊರೋನಾ ಆರೈಕೆಯಲ್ಲಿರುವ ಸುಮಾರು 230 ಸೋಂಕಿತರಿಗೆ ಧೈರ್ಯ ತುಂಬುವ ಕಾರ್ಯ ಮಾಡಿ ಹಾಲು ಹಣ್ಣು ಬಿಸ್ಕೆಟ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರಿಂದ ವಿತರಿಸಿಸಲಾಯಿತು.
ನಂತರ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕೊರೋನಾ ಸೋಂಕಿತರು ಆರೈಕೆ ಪಡೆದು ಮನೆಗೆ ಹೋದ ಮೂರು ತಿಂಗಳ ತನಕ ಲಸಿಕೆಯನ್ನು ಪಡೆಯಬಾರದು ಎಂದು ವೈದ್ಯರು ಹೇಳುತ್ತಾರೆ. ಇದನ್ನು ಪಾಲನೆ ಮಾಡಿ ಕೋವಿಡ್ ಕೇಂದ್ರದಿಂದ ವಾಪಸ್ ಮನೆಗೆ ಹೋದವರು ಮತ್ತೆ ಕಾಯಿಲೆಗೆ ತುತ್ತಾಗದಂತೆ ದೈಹಿಕ ಅಂತರ ಕಾಪಾಡಿಕೊಂಡು ಸದಾ ಮಾಸ್ಕ್ ಧರಿಸುವ ಮೂಲಕ ಜಾಗರೂಕರಾಗಿರಬೇಕು.
ಸರ್ಕಾರ ಕೊರೋನ ಕಾಯಿಲೆಯಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ದಾರರಿಗೆ 1 ಲಕ್ಷ ರೂ. ಧನಸಹಾಯ ನೀಡುವುದಾಗಿ ಘೋಷಿಸಿದೆ .ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಜನರು ವಂಚಿತರಾಗುತ್ತಾರೆ. ಆದ ಕಾರಣ ಕೊರೋನಾ ಸಂಕಷ್ಟದಲ್ಲಿ ನೆರವಾಗಲು ಕಾಯಿಲೆಯಿಂದ ಪ್ರಾಣ ಕಳೆದುಕೊಂಡ ಎಲ್ಲರಿಗೂ ಪರಿಹಾರ ಸಿಗುವಂತಹ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತರಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಒತ್ತಾಯಿಸುತ್ತೇವೆ ಮುಂದಿನ ಕೊರೋನಾ 3ನೇ ಅಲೆ ಬಗ್ಗೆ ಈಗಿನಿಂದಲೇ ಜಿಲ್ಲಾಡಳಿತ ವ್ಯವಸ್ಥಿತ ರೀತಿಯಲ್ಲಿ ಸಜ್ಜಾಗಬೇಕು ಎಂದು ತಿಳಿಸಿದರು.
ನಂತರ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಎಲ್ಲಾ ರೈತ ಮುಖಂಡರನ್ನು ಸ್ಯಾನಿಟೈಸ್ ಯಂತ್ರದ ಸಹಾಯದಿಂದ ಸ್ವಚ್ಛ ಗೊಳಿಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕ ಅಧ್ಯಕ್ಷ ಗಣಗರಹುಂಡಿ ವೆಂಕಟೇಶ್ ಉಪಾಧ್ಯಕ್ಷ ಸಾತಗಳ್ಳಿ ಬಸವರಾಜ್. ಮೈಸೂರು ನಗರ ಅಧ್ಯಕ್ಷ ದೇವೇಂದ್ರ ಕುಮಾರ್ ಮಂಡ್ಯ ಜಿಲ್ಲಾ ಸಂಚಾಲಕ ರಾಮೇಗೌಡ ಕೋವಿಡ ಕೇಂದ್ರದ ಉಸ್ತುವಾರಿ ಸಹಾಯಕ ಅಧಿಕಾರಿ ನಂದೀಶ್ಹ ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ವಿಜಯಕುಮಾರ್ ಉಪಸ್ಥಿತರಿದ್ದರು.
Key words: Distribution -Milk -Fruit – State- Sugarcane- Growers -Association – Corona Infection-mysore