ಸರಕಾರಿ ಗೋಮಾಳ ಒತ್ತುವರಿ : ಕಾರ್ಯಚರಣೆ ಮೂಲಕ ತೆರವುಗೊಳಿಸಿದ ಜಿಲ್ಲಾಡಳಿತ.

Encroachment of Govt. Land: District administration cleared through operations.

 

ಮೈಸೂರು, ಜೂ.22,2024: (www.justkannada.in news) ಜಿಲ್ಲಾಡಳಿತ ನಡೆಸಿದ ಕಾರ್ಯಾಚರಣೆ ಫಲಪ್ರದ. ಕೋಟ್ಯಾಂತರ  ರೂ. ಬೆಲೆಬಾಳುವ ಜಮೀನು ಭೂಗಳ್ಳರಿಂದ ರಕ್ಷಣೆ. ಒತ್ತುವರಿ ಮಾಡಿಕೊಂಡಿದ್ದ 10.28 ಎಕರೆ ಜಮೀನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ವರುಣಾ ಹೋಬಳಿ, ಹಾರೋಹಳ್ಳಿ ಗ್ರಾಮದ ಸರ್ವೆ ನಂ. 274 ರ ಒಟ್ಟು  10.28 ಎಕರೆ ಜಮೀನು ಹುಲ್ಲುಬನ್ನಿ (ಸರಕಾರಿ ಗೋಮಾಳ) ಯಾಗಿದೆ. ಸದರಿ ಜಮೀನನ್ನ ಕರಿಗೌಡ, ನಾರಾಯಣಗೌಡ, ಚಿಕ್ಕಲಿಂಗಯ್ಯ,ತಿಮ್ಮೇಗೌಡ ಎಂಬುವರು ಒತ್ತುವರಿ ಮಾಡಿಕೊಂಡಿದ್ದರು.

ಇದೀಗ ಒತ್ತುವರಿ ತೆರವು ಕಾರ್ಯಚರಣೆ ನಡೆಸಿ ಭೂಗಳ್ಳರಿಗೆ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ನಿರ್ದೇಶನದ ಮೇರೆಗೆ ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿ  ಕೆ.ಆರ್.ರಕ್ಷಿತ್, ಒತ್ತುವರಿ ಜಮೀನು ತೆರವಿಗೆ ತಹಸೀಲ್ದಾರ್ ಗೆ ಆದೇಶಿಸಿದ್ದರು.

ಅದರಂತೆ ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಒತ್ತಯವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

key words:  Encroachment of Govt. Land, District administration, evicted, the encroachment, through operations.