ವಿಚ್ಛೇದನಕ್ಕೆ ” ಬ್ಲೂ ಫಿಲಂ ” ವೀಕ್ಷಣೆ ಆಧಾರವಲ್ಲ : ಹೈಕೋರ್ಟ್ ತೀರ್ಪು

 

ಬೆಂಗಳೂರು, ಮಾ.21,2025 : ಪತ್ನಿ “ ಬ್ಲೂ ಫಿಲ್ಂ” ವೀಕ್ಷಣೆ ಹಾಗೂ “ ಹಸ್ತಮೈಥುನ “ ಮಾಡಿಕೊಳ್ಳುತ್ತಿದ್ದಾಳೆ ಎಂದ ಮಾತ್ರಕ್ಕೆ ವಿಚ್ಛೇದನ ನೀಡಲು ಆಧಾರವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್  ತೀರ್ಪು ನೀಡಿದೆ.

ಮದುವೆಯಾದ ತಕ್ಷಣ ಮಹಿಳೆಯರು ತಮ್ಮ  ಲೈಂಗಿಕ ಸ್ವಾಯತ್ತೆಯನ್ನು ಬಿಟ್ಟುಕೊಟ್ಟಿದ್ದಾರೆಂದು ಅರ್ಥವಲ್ಲ, ಅವರಿಗೆ ಹಸ್ತಮೈಥುನ ಮಾಡಿಕೊಳ್ಳುವ ಹಕ್ಕು ಇದೆ ಎಂದು ಹೈಕೋರ್ಟ್ ಪೀಠ ಪ್ರತಿಪಾದಿಸಿದೆ.

‘ಮದುವೆಯಾದ ನಂತರವೂ ಮಹಿಳೆಗೆ ತನ್ನ ಸ್ವಂತಿಕೆ ಮತ್ತು ವ್ಯಕ್ತಿತ್ವ ಉಳಿಸಿಕೊಳ್ಳುವ ಹಕ್ಕಿದೆ. ಹೆಂಡತಿ ಆದ ಮಾತ್ರಕ್ಕೆ ಮಹಿಳೆಯ ಅಸ್ಮಿತೆಗೆ ಕುತ್ತು ತರುವಂತಿಲ್ಲ’ ಎಂದೂ ಹೇಳಿದೆ.

‘ ನೀಲಿ ಚಿತ್ರದ  ವ್ಯಸನವು  ಕೆಟ್ಟದು ಮತ್ತು ನೈತಿಕವಾಗಿ ಸಮರ್ಥನೀಯವಲ್ಲ. ಆದರೆ, ಇದು ವಿಚ್ಛೇದನಕ್ಕೆ ಕಾನೂನಿನ ಆಧಾರವಾಗುವುದಿಲ್ಲ’.  ‘ಪುರುಷರಲ್ಲಿ ಹಸ್ತ ಮೈಥುನವನ್ನು  ಸಾರ್ವತ್ರಿಕವೆಂದು ಒಪ್ಪಿಕೊಂಡಾಗ,  ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಕಳಂಕವಾಗಿ ಪರಿಗಣಿಸಲಾಗದು’ ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

ವಿಚ್ಛೇದನ ನೀಡಲು ನಿರಾಕರಿ ಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಪೀಠ, ‘ಸ್ವಯಂ ಆನಂದವು ನಿಷಿದ್ಧವಲ್ಲ’  ಎಂದು ತೀರ್ಪಿನಲ್ಲಿ ಹೇಳಿದೆ.

key words: Watching blue films, divorce, Madras High Court

Watching blue films is not grounds for divorce: High Court rules