ಅಯೋಧ್ಯೆ, ಸೆಪ್ಟೆಂಬರ್ 28, 2020 (www.justkannada.in): ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆಗಾಗಿ ವರ್ಚ್ಯುಯಲ್ ದೀಪೋತ್ಸವ ನಡೆಸುವುದಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.
ಅಯೋಧ್ಯೆ ಆಡಳಿತ ಈ ಬಾರಿ ಅಯೋಧ್ಯೆಯಲ್ಲಿ ರಾಮ್ ಲೀಲಾ ನಡೆಸುವುದಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ನಿರಾಕರಿಸಿದೆ. ಹೀಗಾಗಿ ವರ್ಚ್ಯುಯಲ್ ದೀಪೋತ್ಸವ ನಡೆಸುವುದಕ್ಕೆ ಪೂರ್ವ ಸಿದ್ಧತೆ ಆರಂಭಗೊಂಡಿದೆ.
ರಾಮ್ ಲೀಲಾ ನಡೆಸುವುದಕ್ಕೆ ಅಯೋಧ್ಯ ಶೋಧ್ ಸಂಸ್ಥಾನ್ ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಅನುಮತಿ ನೀಡಿಲ್ಲ.
ರಾಮ್ ಲೀಲಾ ಗೆ ನಿರ್ಬಂಧ ವಿಧಿಸಿರುವುದರಿಂದ 300 ಕ್ಕೂ ಹೆಚ್ಚು ರಾಮ್ ಲೀಲಾ ಕಲಾವಿದರು ಜೀವನೋಪಾಯಕ್ಕಾಗಿ ಕಳೆದ 7 ತಿಂಗಳುಗಳಿಂದ ಕಷ್ಟಪಡುತ್ತಿದ್ದಾರೆ. ಸರ್ಕಾರ ಅವರಿಗೆ ವೇತನ ನೀಡಿಲ್ಲ ಎಂದು ರಾಮ್ ಲೀಲಾ ಕಲಾವಿದರೊಬ್ಬರು ಮಾಹಿತಿ ನೀಡಿದ್ದಾರೆ.