ಬೆಂಗಳೂರು,ಆ,15,2020(www.justkannada.in): ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 42 ಎಫ್ ಐಆರ್ ದಾಖಲಾಗಿವೆ.
ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 27, ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ 15 ಪ್ರಕರಣಗಳು ದಾಖಲಾಗಿವೆ. ಇನ್ನು ಪ್ರಕರಣ ಸಂಬಂಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ್ದಾರೆ. ಜತೆಗೆ ಆಸ್ತಿಪಾಸ್ತಿ ಹಾನಿ ಕುರಿತು ಸಾರ್ವಜನಿಕರಿಂದಲೂ ದೂರು ದಾಖಲಾಗಿದೆ.
ಈ ನಡುವೆ ಇಂದು ಡಿಸಿಪಿ ಶರಣಪ್ಪ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ಅವರು ಅಲ್ಲಿನ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಧೈರ್ಯ ಹೇಳಿದರು.
Key words: DJ halli- KG halli- riot case-42 FIR- registrations.