ಬೆಂಗಳೂರು,ಮಾರ್ಚ್,8,2025 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಲಾಲ್ ಬಜೆಟ್ ಎಂದು ಟೀಕಿಸಿದ್ದ ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ಏನು ಬೇಕಾದರೂ ಮಾತನಾಡಲಿ. ಇನ್ನೇನು ಮಾಡಲು ಸಾಧ್ಯ. ಸತ್ಯ ಮುಚ್ಚಿಡುವುದಕ್ಕೆ ಆಗುತ್ತ ಬಜೆಟ್ ಅನ್ನು ಕಣ್ಣಲ್ಲಿ ನೋಡಿದ್ದಾರೆ ಕಿವಿಯಲ್ಲಿ ಕೇಳಿಸಿಕೊಂಡಿದ್ದಾರೆ. ಕಣ್ಣು,ಕಿವಿಗೆ ಸುಳ್ಳು ಹೇಳುವುದಕ್ಕೆ ಆಗಲ್ಲ. ಬಾಯಲ್ಲಿ ಸುಳ್ಳು ಹೇಳಬಹುದು ಅಲ್ವಾ ಅದಕ್ಕೆ ಹೇಳುತ್ತಿದ್ದಾರೆ ಎಂದರು.
Key words: halal budget, BJP, DCM, DK Shivakumar