ಹೆಚ್ ಡಿಕೆ ಭೂ ಒತ್ತುವರಿ ತೆರವು ದ್ವೇಷದ ರಾಜಕಾರಣ ಅಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,20,2025 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೂ ಒತ್ತುವರಿ ತೆರವು ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ದ್ವೇಷದ ರಾಜಕಾರಣ ಕುಮಾರಸ್ವಾಮಿ ಡಿಎನ್ ಎನಲ್ಲಿಯೇ ಇದೆ.  ಸಿಎಂ ಸಿದ್ದರಾಮಯ್ಯ ನಾವೇನ್ ದ್ವೇಷ ಮಾಡುತ್ತೀವಿ. ನಾವ್ಯಾರದರೂ ಕೇಸ್ ಹಾಕಿದ್ದೇವಾ..?  ಕುಮಾರಸ್ವಾಮಿ ಯಾಕೆ ಗಾಬರಿ ಮಾಡಿಕೊಳ್ಳಬೇಕು  ಮರ್ಯಾದೆಯಿಂದ ಇದ್ರೆ ಒಳ್ಳೆಯದು. ಅವರಿಗೂ ಕ್ಷೇಮ ಎಂದರು.

ರಾಮನಗರ ಹೆಸರು ಬದಲಾಗಬಾರದೆಂದು ಷಡ್ಯಂತ್ರ ಮಾಡಿದ್ದಾರೆ.  ಕುಮಾರಸ್ವಾಮಿ ಯಾರನ್ನ ಭೇಟಿ ಮಾಡಿದ್ರು ಎಂಬುದು ಗೊತ್ತು ರಾಮನಗರ ಹೆಸರು ಬದಲಾವಣೆ ಮಾಡೇ ಮಾಡ್ತೇವೆ.  ಹೇಗೆ ಬದಲಾವಣೆ ಮಾಡಬೇಕೆಂದು ನಮಗೆ ಗೊತ್ತು ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: HDK, land encroachment, clearance, not politics, DCM, DK Shivakumar