ಬೆಂಗಳೂರು,ಫೆಬ್ರವರಿ,9,2022(www.justkannada.in): ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಆ ಮುತ್ತುರಾಜನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಲೇವಡಿ ಮಾಡಿದರು.
ಈ ಸಂಬಂಧ ಮುತ್ತುರಾಜ ಎಂದರೆ ರಾಜಕುಮಾರ್ ಎಂದು ಆಗುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ‘ನಾನು ಹೇಳಿದ್ದು ನಮ್ಮ ಪಕ್ಕದ ಮನೆಯ ಡಾ .ರಾಜಕುಮಾರ್ ಅವರ ಬಗ್ಗೆ ಅಲ್ಲ. ಬಿಜೆಪಿಯ ರಾಜಕುಮಾರ, ಬಿಜೆಪಿಯ ಮುತ್ತುರಾಜನ ಬಗ್ಗೆ’ ಎಂದು ಉತ್ತರಿಸಿದರು.
ಮಹಿಳೆಯರ ಉಡುಪು ಅವರ ಇಚ್ಛೇ ಎಂಬ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕೊಟ್ಟಿರುವ ಹಕ್ಕಿನ ಬಗ್ಗೆ ಅವರು ಮಾತನಾಡಿದ್ದಾರೆ’ ಎಂದು ಹೇಳಿದರು.
Key words: DK shivakumar-bjp-mutturaja