ನವದೆಹಲಿ,ಜುಲೈ1,2022(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಇಡಿ ವಿಶೇಷ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ದೆಹಲಿಯ ಇಡಿ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣ ಕುರಿತಂತೆ ಈ ಹಿಂದೆಯೇ ತನಿಖೆ ನಡೆಸಿದ್ದ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯನ್ನು ಆಧರಿಸಿಯೇ ಡಿಕೆ ಶಿವಕುಮಾರ್ ಸೇರಿ ಐವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಸಮನ್ಸ್ ಹಿನ್ನೆಲೆಯಲ್ಲಿ ಇಂದು ಡಿಕೆಶಿ ಸೇರಿದಂತೆ ಐವರ ವಿಚಾರಣೆ ನಡೆಯುತ್ತಿದೆ.
ವಿಚಾರಣೆಗೆ ಹಾಜರಾಗುವ ಮುನ್ನ ಮಾತನಾಡಿರುವ ಡಿ.ಕೆ ಶಿವಕುಮಾರ್, ಇಂದು ವಿಚಾರಣೆಗೆ ಕರೆದಿದ್ದಾರೆ ನನ್ನ ಜೊತೆ ಇತರರು ಬರುತ್ತಾರೆ. ತಡವಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ . ಕೋರ್ಟ್ ಏನು ಹೇಳುತ್ತೆ ಅಂತಾ ಅನುಭವ ಇಲ್ಲ . ನಮ್ಮ ಒಂದಿಬ್ಬರು ವಕೀಲರನ್ನ ನಿಯೋಜಿಸಿಕೊಂಡಿದ್ದೇವೆ. ಕೋರ್ಟ್ ಆದೇಶದ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
Key words: DK Shivakumar – ED -Special Court-hearing