ಮತ್ತೆ ಪರೋಕ್ಷವಾಗಿ ಸಿಎಂ  ಆಸೆ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್

ಮಂಡ್ಯ,ಜನವರಿ,27,2023(www.justkannada.in): ಸಿಎಂ ಹುದ್ದೆ ಕಣ್ಣಿಟ್ಟಿರುವಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೀಗ ಸಿಎಂ ಆಗುವ ಆಸೆಯನ್ನ ಪರೋಕ್ಷವಾಗಿ ಮತ್ತೆ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾವು ಜೆಡಿಎಸ್​​ಗೆ ಅಧಿಕಾರ ನೀಡಿದ್ದವು. ಆದರೆ ಅವರು ಉಳಿಸಿಕೊಳ್ಳಲಿಲ್ಲ. ಹಿಂದೆ  ಹೆಚ್.ಡಿ ದೇವೇಗೌಡರನ್ನು ಸಿಎಂ ಆಗಿ ಮಾಡಿದ್ವಿ, ಪ್ರಧಾನಮಂತ್ರಿಯಾಗಿ ಮಾಡಿದ್ದವು. ನಾನು ನಿಮ್ಮ ಮಣ್ಣಿನ ಮಗನಾಗಿ ಕೇಳುತ್ತಿದ್ದೇನೆ. ನಾನು ನಿಮ್ಮ ಮಣ್ಣಿನ ಮಗನಾಗಿ ಕನಕಪುರದ ಮಗನಾಗಿ ಕೇಳುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಕೇಳುತ್ತಿದ್ದೇನೆ. ಈ ನಿಮ್ಮ ಮಗನಿಗೆ ಅಧಿಕಾರದ ಶಕ್ತಿ ನೀಡಿ ಎಂದು ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಗೂ ನನಗೂ 40 ವರ್ಷದ ಸಂಬಂಧವಿದೆ. ಮಂಡ್ಯ, ಕನಕಪುರ, ರಾಮನಗರ ನನಗೆ ಬೇರೆ ಅಲ್ಲ. ಎಸ್.ಎಂ.ಕೃಷ್ಣ ಕಾಲದಿಂದಲೂ ಈ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಂಡ್ಯ ಜಿಲ್ಲೆಯ ಏಳಕ್ಕೆ 7 ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಗೆಲ್ಲಿಸಿದ್ದೀರಿ. ನಾವು ಜೆಡಿಎಸ್​ಗೆ ಅಧಿಕಾರ ಕೊಟ್ಟಿದ್ದೆವು, ಅವರು ಉಳಿಸಿಕೊಂಡಿಲ್ಲ. ನಾನು ನಿಮ್ಮ ಮಣ್ಣಿನ ಮಗನಾಗಿ ಕೇಳ್ತಿದ್ದೀನಿ, ಅಧಿಕಾರದ ಶಕ್ತಿ ಕೊಡಿ. ಮೇಕೆದಾಟು ಯೋಜನೆಗಾಗಿ 170 ಕಿ.ಮೀ ಪಾದಯಾತ್ರೆ ಮಾಡಿದ್ದೆವು. ಕೊರೊನಾ ಸಂದರ್ಭ ಎಂದು ಎಲ್ಲರ ಮೇಲೂ ಕೇಸ್ ಹಾಕಿದರು. ಆದ್ರೆ ಬಿಜೆಪಿಯವರ ಮೇಲೆ ಕೇಸ್ ಹಾಕಲಿಲ್ಲ ಎಂದರು.

Key words: DK Shivakumar- expressed – desire – CM- again- indirectly