ನವದೆಹಲಿ,ಅ,21,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಡಿ.ಕೆ ಸುರೇಶ್ ಅವರು ಜಾರಿ ನಿರ್ದೇಶನಾಲಯಕ್ಕೆ ದಾಖಲೆಗಳನ್ನ ಸಲ್ಲಿಕೆ ಮಾಡಿದ್ದಾರೆ.
ಇಡಿ ಅಧಿಕಾರಿಗಳ ಕೋರಿಕೆ ಮೇರೆಗೆ ಇಡಿಯ ದೆಹಲಿ ಕಚೇರಿಗೆ ವಕೀಲರೊಂದಿಗೆ ಆಗಮಿಸಿ ಸಂಸದ ಡಿ.ಕೆ ಸುರೇಶ್, ಡಿ.ಕೆ ಶಿವಕುಮಾರ್ ಆರ್ಥಿಕ ವ್ಯವಹಾರಗಳ ದಾಖಲೆ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಸುರೇಶ್, ಸುಮಾರು ಐದು ಸಾವಿರ ಪುಟಗಳ ದಾಖಲೆ ಸಲ್ಲಿಕೆ ಮಾಡಿದ್ದೇವೆ. ದಾಖಲೆ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ. ಡಿ.ಕೆ ಶಿವಕುಮಾರ್ ಪರವಾಗಿ ವಕೀಲರ ಸಮ್ಮುಖದಲ್ಲಿ ದಾಖಲೆ ಸಲ್ಲಿಸಿದೆ. ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ರು. ಡಿ.ಕೆ ಶಿವಕುಮಾರ್ ಬಂಧನದಲ್ಲಿದ್ರು ಹಾಗಾಗೀ ದಾಖಲೆ ನೀಡಿರಲಿಲ್ಲ. ಹೆಚ್ಚಿನ ದಾಖಲೆ ಬೇಕಾದ್ರೆ ಕೊಡ್ತಿವಿ ಎಂದು ಹೇಳಿದ್ದೇವೆ ಎಂದರು.
೪ ರಿಂದ ೫ ಸಾವಿರ ಪುಟಗಳ ದಾಖಲೆ ನೀಡಿದೆ. ಸಿಬಿಐ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ, ಟಿವಿಯಲ್ಲಿ ಬರ್ತಿದೆ. ಇನ್ನು ಏನೇನ್ ಆಗಿದೆ ನಾನು ನೋಡಬೇಕು. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದೆ. ಹಾಗಾಗೀ ಸಿಬಿಐ ಸೇರಿ ಎಲ್ಲ ವಿಚಾರಣೆ ಸಿದ್ದವಾಗಿದ್ದೇವೆ. ಸಮನ್ಸ್ ಪ್ರಶ್ನೆ ಮಾಡಿದ ಅರ್ಜಿ ಅಕ್ಟೋಬರ್ ೨೪ ಕ್ಕೆ ಮುಂದೂಡಿಕೆ ಆಗಿದೆ. ಜಾಮೀನು ಅರ್ಜಿ ತೀರ್ಪು ಏನಾಗುತ್ತೆ ಕಾದು ನೋಡಬೇಕು ಎಂದು ತಿಳಿಸಿದರು.
Key words: DK Shivakumar illegal -money transfer-DK Suresh- submitted – document – ED