ಕುತೂಹಲಕ್ಕೆ ಕಾರಣವಾಯ್ತು ಡಿಕೆ ಶಿವಕುಮಾರ್- ಸಚಿವ ಆನಂದ್ ಸಿಂಗ್ ಭೇಟಿ.

ಬೆಂಗಳೂರು,ಜನವರಿ,31,2022(www.justkannada.in):  ಕೆಪಿಸಿಸಿ  ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ಸಚಿವ ಆನಂದ್‌ ಸಿಂಗ್‌ ಭೇಟಿಯಾಗಿದ್ದು,  ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು  ಹೇಳಿಕೆ ನೀಡಿದ್ದರು. ಇದೀಗ ಆನಂದ್ ಸಿಂಗ್ ಅವರು ಡಿ.ಕೆ ಶಿವಕುಮಾರ್ ಅವರನ್ನ ಮನೆಯಲ್ಲಿ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ.

ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆನಂದ್ ಸಿಂಗ್,  ಇದೊಂದು ಸೌಜ್ಯನ್ಯಯುತ ಭೇಟಿ ಎಂದಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಮಾತನಾಡಿ, ಆನಂದ್ ಸಿಂಗ್ ಭೇಟಿಗೂ ರಾಜಕೀಯಕ್ಕೂ ಸಂಬಂಧಿವಿಲ್ಲ. ಮನೆಯಲ್ಲಿ ನೇರವಾಗಿ ಬಂದು ರಾಜಕೀಯ ಮಾತನಾಡಲ್ಲ.  ರಾಜಕೀಯ ಮಾತನಾಡೋದಾದ್ರೆ ರೆಸಾರ್ಟ್ ಹೋಟೆಲ್ ಗೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರ ಪತನ ವೇಳೆಯಲ್ಲಿ ಸಚಿವ ಆನಂದ್‌ ಸಿಂಗ್‌ ಕಾಂಗ್ರೆಸ್‌  ತೊರೆದು ಬಿಜೆಪಿಗೆ  ಸೇರಿ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ.

Key words: DK Shivakumar – Minister -Anand Singh -meet

ENGLISH SUMMARY…

D.K. Shivakumar-Anand Singh’s meeting triggers curiosity
Bengaluru, January 31, 2022 (www.justkannada.in): KPCC President D.K. Shivakumar and Minister Anand Singh’s meeting has triggered curiosity in the political circle in the State.
Recently former Chief Minister Siddaramaiah and D.K. Shivakumar had mentioned that a few BJP leaders are in their contact. Accordingly Anand Singh’s meeting with D.K. Shivakumar at the latter’s residence today has triggered curiosity.
In his response Minister Anand Singh said it is just a cordial visit. Meanwhile D.K. Shivakumar informed that there is nothing political about their discussion. “Nobody comes directly to the house and discusses politics. If we want to discuss politics, we will go to a resort or a hotel,” he clarified.
Minister Anand Singh had quit from his earlier party during the coalition government joined the BJP and won in the byelection.
Keywords: Minister Anand Singh/ D.K. Shivakumar/ meet/ curiosity