ಬೆಂಗಳೂರು,ನವೆಂಬರ್,4,2022(www.justkannada.in): ಕಾಂಗ್ರೆಸ್ ಬಾಗಿಲು ಕ್ಲೋಸ್ ಆಗಿದೆ ಎಂದು ಹೇಳೀಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಹೌದಪ್ಪ ನಮ್ಮ ಬಾಗಿಲು ಕ್ಲೋಸ್ ಆಗಿದೆ. ಆದರೆ ಬಿಜೆಪಿಯವರು ಶಾಸಕರನ್ನ ದುಡ್ಡು ಕೊಟ್ಟು ಖರೀದಿ ಮಾಡಿದ್ರು. 13 ಶಾಸಕರನ್ನಖರೀದಿಸುವಾಗ ಎಲ್ಲಿ ಹೋಗಿತ್ತು ತಾಕತ್ತು. ಆಗ ಬಿಜೆಪಿ ಬಾಗಲು ಕ್ಲೋಸ್ ಆಗಿರಲಿಲ್ವಾ…? ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಡಿ.ಕೆ ಶಿವಕುಮಾರ್ ಭ್ರಷ್ಟಾಚಾರದ ಬ್ರಾಂಡ್ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಅಶ್ವಥ್ ನಾರಾಯಣ್ ಹೇಳಿಕೆಗೆ ಕಾಲವೇ ಉತ್ತರಿಸುತ್ತೆ ಎಂದರು. ಇನ್ನು ಕಾಂಗ್ರೆಸ್ ಅರ್ಜಿ ಶುಲ್ಕ ವಿಚಾರದ ಬಗ್ಗೆ ಬಿಜೆಪಿ ಟೀಕಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಬಿಜೆಪಿ ಸರ್ಕಾರ ಇದೆ. ಬಾಂಡ್ ವಸೂಲಿ ಮಾಡಿದ್ದಾರೆ. ನಮಗೆ ಬಾಂಡ್ ಕೊಡುವವರು ಯಾರೂ ಇಲ್ಲ. ನಾವು ನಮ್ಮ ಕಾರ್ಯಕರ್ತರ ಬಳಿ ಬಾಂಡ್ ತೆಗೆದುಕೊಳ್ಳುತ್ತೇವೆ. ನಾನು ಬಾಂಡ್ ತೆಗೆದುಕೊಂಡರೇ ಬಿಜೆಪಿಗೇನು ನೋವು ಎಂದು ಪ್ರಶ್ನಿಸಿದರು.
ಅರ್ಜಿಗೆ 5 ಸಾವಿರ ಶುಲ್ಕ ಹಾಗೂ 2 ಲಕ್ಷ ರೂ. ಡಿಡಿ ಕೇಳಿದ್ದೇವೆ. ನಮ್ಮ ಪಕ್ಷದ ಯಾವ ಕಾರ್ಯಕರ್ತನೂ ಅಸಮಾಧಾನ ವ್ಯಕ್ತಪಡಿಸಿಲ್ಲ ಅಂತವರು ನಮ್ಮ ಪಕ್ಷದಲ್ಲಿ ಇರಬೇಕಿಲ್ಲ ಎಂದರು.
Key words: DK Shivakumar – Naleen Kumar Kateel – Congress -door – closed.