ರಾಮನಗರ,ಮೇ,8,2023(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವಕ್ಷೇತ್ರದ ಜನರ ಮುಂದೆ ಮತ್ತೆ ಬಹಿರಂಗವಾಗಿಯೇ ಮುಖ್ಯಮಂತ್ರಿಯಾಗುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ.
ಕನಕಪುರದಲ್ಲಿ ಇಂದು ಕೊನೆಯ ದಿನ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ನನಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ನೀವು ಶಕ್ತಿ ಕೊಡಬೇಕು. ನಿಮ್ಮ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು.
ಕನಕಪುರ ತಾಲ್ಲೂಕು ಹೆಚ್ಚು ಅಭಿವೃದ್ಧಿಯಾಗಿದೆ. ಇಲ್ಲಿ ನಾನು ಅಭ್ಯರ್ಥಿ ಅಲ್ಲ ನೀವೇ ಅಭ್ಯರ್ಥಿಗಳು. ನಾನು ಕ್ಷೇತ್ರದಲ್ಲಿ ಮತಯಾಚಿಸಲು ಬಂದಿಲ್ಲ. ಆದರೂ ನೀವು ನನಗೆ ಇಷ್ಟೊಂದು ಪ್ರೀತಿ ತೋರಿದ್ದೀರಿ. ಅಧಿಕಾರ ಬರುತ್ತೆ ಹೋಗುತ್ತೆ ತಲೆಕೆಡಿಸಿಕೊಳ್ಳಲ್ಲ ಕನಕಪುರ ಜನರಿಂದ ಶಾಸಕನಾದೆ ಮಂತ್ರಿಯಾದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾನು ಕೆಪಿಸಿಸಿ ಅಧ್ಯಕ್ಷನಾದೇ. ಅಧೀಕಾರ ಇಲ್ಲದಿದ್ದರೂ ಕೊರೋನಾ ವೇಳೆ ಕೆಲಸ ಮಾಡಿದ್ದೇನೆ. ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ನಿಮ್ಮ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ ಎಂದರು.
ಭ್ರಷ್ಟಾಚಾರ ರಹಿತ. ಜನಪರ ಆಡಳಿತ ನೀಡಿದ್ದೇನೆ. ಮೇ 10 ಕೇವಲ ಮತದಾನದ ದಿನ ಅಲ್ಲ. ರಾಜ್ಯದ ಭವಿಷ್ಯ ಬದಲಿಸುವ ದಿನ, ಕನಕಪುರಕ್ಕೆ ಬಂದ ಮೆಡಿಕಲ್ ಕಾಲೇಜನ್ನ ಬಿಜೆಪಿಯವರು ಕಿತ್ತುಕೊಂಡರು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸೋ ಕೆಲಸ ಮಾಡುತ್ತೇವೆ. ಕನಕಪುರ ಹೋರಾಟದಲ್ಲಿ ಗೆದ್ದೇ ಗೆಲ್ಲುವೆ. ಕಾಂಗ್ರೆಸ್ ಅಧಿಕಾರಕ್ಕೆ ತಂದರೇ ಜನಪರ ಯೋಜನೆ ಜಾರಿ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದರು.
Key words: DK Shivakumar -openly -expressed -desire – become- CM