ಬೆಂಗಳೂರು,ಜನವರಿ,7,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ 60% ಕಮಿಷನ್ ಆರೋಪ ಮಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ. ಕರ್ನಾಟಕಕ್ಕೆ ಏನು ಕೊಡುಗೆ ಕೊಡಬೇಕೆಂದು ಯೋಚನೆ ಮಾಡಲಿ. ಅದು ಬಿಟ್ಟು ಇಂತಹ ಆರೋಪ ಮಾಡುವುದನ್ನ ಬಿಡಿ ಶನಿವಾರ, ಭಾನುವಾರ ರಾಜ್ಯಕ್ಕೆ ಬರೋದು. ಆರೋಪ ಮಾಡೋದು ಎಂದು ಟೀಕಿಸಿದರು.
ಚುನಾವಣೆ ಇನ್ನು ದೂರ ಇದೆ. ಅಲ್ಲಿವರೆಗೂ ಕೆಲಸ ಮಾಡಲಿ. ಚುನಾವಣೆ ಬಂದಾಗ ಆರೋಪ ಮಾಡುವುದು ಸಹಜ. ಕುಮಾರಸ್ವಾಮಿ ರಾಜ್ಯದ ಅಭಿವೃದ್ದಿ ಬಗ್ಗೆ ಚಿಂತನೆ ಮಾಡಲಿ. 60% ಕಮಿಷನ್ ಆರೋಪ ಮಾಡುವುದನ್ನ ಬಿಡಲಿ ಎಂದು ಡಿಕೆ ಸುರೇಶ್ ಟಾಂಗ್ ಕೊಟ್ಟರು.
Key words: 60% commission, development, state, DK Suresh, HDK