ನನಗೂ ಒಂದು ಕನಸು ಇದೆ, ಅಣ್ಣ ಸಿಎಂ ಆಗಬೇಕು- ಮಾಜಿ ಸಂಸದ ಡಿಕೆ ಸುರೇಶ್

ಬೆಂಗಳೂರು,ಮಾರ್ಚ್,1,2025 (www.justkannada.in): ನನಗೆ  ಅಣ್ಣ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಕನಸು ಇದೆ. ಆದರೆ ಸದ್ಯ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ  ಡಿಕೆ ಸುರೇಶ್,  ಅಣ್ಣ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಆಸೆ ಇದೆ. ಆದರೇ ಅದಕ್ಕೆ ಕಾಲ ಕೂಡಿ ಬರಬೇಕಲ್ಲವಾ. ಸದ್ಯ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಸೀಟ್ ಖಾಲಿ ಇದ್ದಾಗ ಮಾತ್ರ ಪ್ರಯತ್ನ ಮಾಡಬೇಕು. ಬಲಂತವಾಗಿ ಎಳೆದು ಸೀಟ್ ಮೇಲೆ  ಕೂರಿಸಲು ಆಗಲ್ಲ.  ನಮಗೆ ನಂಬಿಕೆ ಇದೆ. ನಂಬಿಕೆ ಮೇಲೆಯೇ ಜೀವನ  ಎಂದರು.

ಕಾಂಗ್ರೆಸ್ ಹೈಕಮಾಂಡ್ ಅವರನ್ನು ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದರಲ್ಲಿ ಯಾವುದೇ ಹೊಸತು ಇಲ್ಲ. ಅವರು ನಿರಂತರವಾಗಿ ಭೇಟಿ ಮಾಡುತ್ತಲೇ ಇರುತ್ತಾರೆ. ಅವರ ಮುಂದೆ ಡಿಮ್ಯಾಂಡ್ ಇಡಲು  ಏನಿದೆ. ಅವರನ್ನು  ಪಕ್ಷವೇ ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: dream, my brother, become, CM, Former MP,  DK Suresh