ಬೆಂಗಳೂರು, ಮೇ 02, 2020 (www.justkannada.in): ಆನೇಕಲ್ ನಲ್ಲಿ ಸಂಸದ ಡಿ.ಕೆ ಸುರೇಶ್ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದಕ್ಕೆ ಕಾರಣವಾಗಿದ್ದು ಅಂಗನವಾಡಿಗೆ ಸೇರಿದ ಅಡಿಗೆ ಸಾಮಾಗ್ರಿಗಳ ಮೇಲೆ ಬಿಜೆಪಿ ಸೀಲ್ ಮಾಡಲಾಗಿದೆ ಎಂಬ ವಿಷಯ. ಪ್ಯಾಕೆಟ್ ಮೇಲೆ “ಇದು ಮಾರಾಟಕ್ಕಿಲ್ಲ” ಅಂತ ಇದೆ ಅಂತ ಬರೆಯಲಾಗಿತ್ತು. ನೀವು ಇದನ್ನು ರೀಫಿಲ್ಲಿಂಗ್ ಮಾಡ್ತಾಯಿದ್ದೀರಿ.
ಸರಕಾರಿ ಸಾಮಗ್ರಿಗಳಿಗೆ ಬಿಜೆಪಿ ಸೀಲ್ ಹಾಕಿ ವಿತರಣೆ ಮಾಡುತ್ತಿದ್ದೀರಾ. ಇದಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ತನಿಖೆ ಆಗಬೇಕು. ಇಲ್ಲದಿದ್ದರೆ ಇದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಬಿಜೆಪಿಯವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ಸಾಮಾಗ್ರಿಗಳನ್ನು ಜನರಿಗೆ ಕೊಡಲು ನಾವು ತಂದಿರೋದು. ಆದ್ರೆ ಇದು ಸರ್ಕಾರದ ಸ್ವತ್ತಲ್ಲ. ಇದು ನಾನು ಸ್ವಂತ ಹಣದಿಂದ ತಂದಿರುವ ಸಾಮಾಗ್ರಿಗಳು ಎಂದು ಮುನಿರಾಜು ಹೇಳಿದ್ದಾರೆ.