ಇನ್ಮುಂದೆ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಓಡಾಡಿದ್ರೆ ದಂಡದ ಜತೆ ಡಿಎಲ್ ಅಮಾನತು…

ಬೆಂಗಳೂರು,ಅಕ್ಟೋಬರ್,20,2020(www.justkannada.in):  ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನ ಕಡಿಮೆ ಮಾಡಲು ಸಾರಿಗೆ ಇಲಾಖೆ ಟಫ್ ರೂಲ್ಸ್ ಗಳನ್ನ ತರುತ್ತಿದ್ದು ಈ ನಡುವೆ ಹೆಲ್ಮೆಟ್ ಧರಿಸದೇ ಓಡಾಡುವ ಬೈಕ್ ಸವಾರರಿಗೆ ದಂಡದ ಜತೆಗೆ ಮೂರು ತಿಂಗಳ ಡಿಎಲ್ ಅಮಾನತು ಮಾಡಲು ನಿರ್ಧರಿಸಿದೆ.dl-suspension-not-wear-helmet-fine-transport-department

dl-suspension-not-wear-helmet-fine-transport-department

ಈ ಸಂಬಂಧ ಈಗಾಗಲೇ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ನಾಲ್ಕು ವರ್ಷದ ಮೇಲ್ಪಟ್ಟ ಎಲ್ಲಾ ಹಿಂಬದಿಯ ಸವಾರರು ಹೆಲ್ಮೆಟ್ ಧರಿಸೋದು ಕಡ್ಡಾಯ. ಹೆಲ್ಮೆಟ್ ಧರಿಸದೇ ಓಡಾಡುವ ಬೈಕ್ ಸವಾರರಿಗೆ ದಂಡ ವಸೂಲಾತಿಯೊಂದಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳ ಕಾಲ ಅಮಾನತು ಮಾಡಬೇಕು. ಈ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ/ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ/ ಪ್ರವರ್ತನ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.

ಇನ್ನು ಹಿಂಬದಿಯ ಸವಾರರು ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು,  ಇದೀಗ  ಕಾನೂನನ್ನು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲು  ಈ ನಿಯಮವನ್ನ ಸಾರಿಗೆ ಇಲಾಖೆ ಜಾರಿಗೆ ತಂದಿದೆ.dl-suspension-not-wear-helmet-fine-transport-department

ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗಿತ್ತಿದ್ದು, ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಎಷ್ಟೇ ಕಾನೂನು ಜಾರಿ ಮಾಡಿದರೂ ನಿಯಮ ಸರಿಯಾಗಿ ನಿಯಮ ಪಾಲನೆ ಮಾಡಲ್ಲ ಎಂಬ ಆರೋಪವೂ ಇದೆ.  ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸಬೇಕೆಂಬ ಕಾನೂನಿದ್ದರೂ ಜನರು ಸರಿಯಾಗಿ ಪಾಲನೆ ಮಾಡ್ತಿಲ್ಲ. ಜನರ ನಿರ್ಲಕ್ಷ್ಯತೆಯಿಂದಾಗಿ ಅಪಘಾತಗೊಂಡು ಸಾವನ್ನಪ್ಪುವರ ಸಂಖ್ಯೆ ಜಾಸ್ತಿ ಆಗ್ತಿದೆ. ಹಾಗಾಗಿ, ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೇ ದಂಡದ ಜೊತೆಗೆ ಡಿಎಲ್ ಅಮಾನತು ಮಾಡಲು ಸರ್ಕಾರ ನಿರ್ಧರಿಸಿದೆ.

Key words: DL -suspension –not –wear- helmet-fine- transport-department