ಮೈಸೂರು,ನವೆಂಬರ್,21,2020(www.justkannada.in): ವೈದ್ಯರೊಬ್ಬರಿಗೆ ಗ್ಯಾಂಗ್ ನಿಂದ ಬ್ಲಾಕ್ ಮೇಲ್ ಪ್ರಕರಣ ಸಂಬಂಧ, ಬ್ಲಾಕ್ ಮೇಲ್ ಬಗ್ಗೆ ಗೌಪ್ಯತೆ ಕಾಪಾಡಬೇಡಿ. ಬ್ಲಾಕ್ ಮೇಲ್ ಗೆ ಒಳಗಾದವರು ಭಯಪಡದೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮೈಸೂರು ಡಿಸಿಪಿ ಡಾ.ಪ್ರಕಾಶ್ ಗೌಡ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಪ್ರಕಾಶ್ ಗೌಡ, ಬ್ಲಾಕ್ ಮೇಲ್ ಗೆ ಒಳಗಾದವರು ಭಯಪಡದೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುವುದು ನಡೆಯುತ್ತಲೇ ಇರುತ್ತದೆ. ಬ್ಲಾಕ್ ಮೇಲ್ ಗೆ ಒಳಗಾದವರು ಹೆದರದೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಪಿರಿಯಾಪಟ್ಟಣದ ವೈದ್ಯರೊಬ್ಬರಿಗೆ ಬ್ಲಾಕ್ ಮೇಲ್ ಮೂಲಕ 31.30 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಪೊಲೀಸರಿಗೆ ಆಗಲೇ ಮಾಹಿತಿ ನೀಡಿದ್ದರೆ, ಹೀಗೆ ಹಣ ಕಳೆದುಕೊಳ್ಳುತ್ತಿರಲಿಲ್ಲ. ಇಂತಹ ಘಟನೆಗಳಿಗೆ ಹೆದರದೆ ಧೈರ್ಯದಿಂದ ಮಾಹಿತಿ ನೀಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಯುತ್ತಿದೆ. ಈ ಗ್ಯಾಂಗ್ ನಿಂದ ಬ್ಲಾಕ್ ಮೇಲ್ ಆದವರು ಪೊಲೀಸರಿಗೆ ಮಾಹಿತಿ ನೀಡಿ ಎಂದು ಡಿಸಿಪಿ ಡಾ.ಪ್ರಕಾಶ್ಗೌಡ ಹೇಳಿದರು.
Key words: Do not -maintain -confidentiality – Fraud-Inform -police –mysore-DCP Dr. Prakash Gowda.