ಬೆಂಗಳೂರು,ಫೆ,5,2020(www.justkannada.in): ನನಗೆ ಸಚಿವ ಸ್ಥಾನ ನೀಡದಿದ್ರೆ ಬೇಸರವಿಲ್ಲ. ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ಸಚಿವಾಕಾಂಕ್ಷಿ, ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ನಾಳೆ ಮುಹೂರ್ತ ಫಿಕ್ಸ್ ಆಗಿದ್ದು, ನೂತನ ಹತ್ತು ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಈ ಬೆನ್ನಲ್ಲೆ ಈ ಬಗ್ಗೆ ಮಾತನಾಡಿರುವ ಹಿರಿಯ ಶಾಸಕ ಉಮೇಶ್ ಕತ್ತಿ, ಮಂತ್ರಿಸ್ಥಾನ ಕೊಟ್ಟರೆ ರಾಜ್ಯದ ಕೆಲಸ ಮಾಡ್ತೀನಿ, ಇಲ್ಲವಾದ್ರೆ ಶಾಸಕನಾಗಿ ಜಿಲ್ಲೆ ಕ್ಷೇತ್ರದ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಸಿಗದಿದ್ರೆ ಬೇಸರವಿಲ್ಲ ಎಂದಿದ್ದಾರೆ.
ನೂರಕ್ಕೆ ನೂರು ನಾನು ಮಂತ್ರಿ ಆಗುವ ವಿಶ್ವಾಸ ಇದೆ. 13 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ಕೊಟ್ಟರೂ ರಾಜ್ಯದ ಜನರ ಕೆಲಸ ಮಾಡುತ್ತೇನೆ. ನಾನು ಮಂತ್ರಿ ಮಾಡಿದರೇ ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ಇನ್ನು ಮಂತ್ರಿ ಆದ ಮೇಲೆ ಬೆಳಗಾವಿ ಉಸ್ತುವಾರಿ ಸಿಎಂ ಬಳಿ ಕೇಳುತ್ತೇನೆ. ನಾನು ಪಕ್ಷದಲ್ಲಿ ಸೀನಿಯರ್ ಆಗಿದ್ದೇನೆ. ಹೀಗಾಗಿ ಉಸ್ತುವಾರಿ ಸಚಿವ ಸ್ಥಾನ ಕೇಳುತ್ತೇನೆ ಎಂದರು.
Key words: Do not –minister position-mla-Umesh katti