ಬೆಂಗಳೂರು, ಜುಲೈ 21, 2020 (www.justkannada.in): ವೈದ್ಯರು ಹಾಗೂ ನರ್ಸ್ ಗಳ ಮಾಸಿಕ ವೇತನ ಹೆಚ್ಚಳ ಮಾಡಿದ್ದು, ಇದು ಮುಂದಿನ 6 ತಿಂಗಳಿಗೆ ಅನ್ವಯವಾಗಲಿದೆ.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಕಾಳಸಂತೆಗೆ ಕಡಿವಾಣ ಹಾಕಲು ರೆಮಿಡಿಸ್ವಿಯರ್ ಔಷಧಿ ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ.
ನಿನ್ನೆ ಅಪೂಣ೯ಗೊಂಡಿದ್ದ ಕೋವಿಡ್ ಟಾಸ್ಕ್ ಫೋಸ್‌೯ ಸಭೆ ಇಂದು ನಡೆಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಕಾಯ೯ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದರಿಂದ ಅವರ ಹೊರತಾಗಿ ಎಲ್ಲ ಸಚಿವರು, ಸಕಾ೯ರದ ಮುಖ್ಯ ಕಾಯ೯ದಶಿ೯ಗಳು, ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಸಭೆಯಲ್ಲಿ ಪಾಲ್ಗೊಂಡು ಕೆಲ ಮಹತ್ವದ ನಿಧಾ೯ರಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸೇರಿದಂತೆ ಉಸ್ತುವಾರಿ ಸಚಿವರು ಉಪಸ್ಥಿತರಿದ್ದರು.
ಟಾಸ್ಕ್ ಫೋರ್ಸ್ ಸಭೆಯ ಮುಖ್ಯಾಂಶಗಳು
• ಪ್ರಮುಖವಾಗಿ ನಾಲ್ಕು ಲಕ್ಷ ರಾಪಿಡ್ ಆಂಟಿಜನ್ ಕಿಟ್ ಮತ್ತು ಐದು ಲಕ್ಷ ಕಿಟ್ ಖರೀದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
• ಕೋವಿಡ್ ನಿವ೯ಹಣೆಗೆ ಹೆಚ್ಚುವರಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ.
• ರಾಪಿಡ್ ಆಂಟಿಜನ್ ಟೆಸ್ಟ್‌ಗಳಿಗೆ ಸಂಬಂಧಿಸಿದಂತೆ ಸಕಾ೯ರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ತೀಮಾ೯ನಿಸಲಾಗಿದೆ.
• ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆ ಸಾಮಥ್ಯ೯ದಲ್ಲಿ ಶೇಕಡಾ 50%ರಷ್ಟನ್ನು ಕೋವಿಡ್ ಚಿಕಿತ್ಸೆಗಾಗಿ ಸಕಾ೯ರಕ್ಕೆ ನೀಡಬೇಕು. ಉಳಿದ ಶೇಕಡಾ.50% ಹಾಸಿಗೆಗಳನ್ನು ಖಾಸಗಿಯವರು ಕೋವಿಡ್ ಮತ್ತು ಕೋವಿಡ್ ಯೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂಬ ನಿಧಾ೯ರಕ್ಕೆ ಅನುಮೋದನೆ ನೀಡಲಾಗಿದೆ.
• ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕನಾ೯ಟಕ (ಎಬಿ-ಎಆರ್‌ಕೆ) ಯೋಜನೆಯ ಪ್ಯಾಕೇಜ್ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಯೂಸರ್ ಚಾಜ್‌೯ ಆಧಾರದ ಮೇಲೆ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಯಿತು.
• ಕೋವಿಡ್ ನಿವ೯ಹಣೆಗೆ ವೈದ್ಯಕೀಯ ಪರಿಕರ, ಔಷಧಿ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಎಸಿಎಸ್, ಐಟಿಬಿಟಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಅನುಮೋದನೆ ನೀಡಲಾಗಿದೆ.
• ಕೋವಿಡ್ ನಿವ೯ಹಣೆಯಲ್ಲಿ ಕಾಯ೯ ನಿರತರಾಗಿರುವ ಆರೋಗ್ಯ ಕಾಯ೯ಕತ೯ರ ಸುರಕ್ಷತೆಗಾಗಿ 2,59,263 ಎನ್ -95 ಮಾಸ್ಕ್ 2,59,263 ಪಿಪಿಇ ಖರೀದಿಗೆ ಒಪ್ಪಿಗೆ ನೀಡಲಾಗಿದೆ.
• ಕೋವಿಡ್ ನಿವ೯ಹಣೆ ಉದ್ದೇಶಕ್ಕಾಗಿ 17 ಸಕಾ೯ರಿ ಮೆಡಿಕಲ್ ಕಾಲೇಜುಗಳಲ್ಲಿ 4,736 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‌ಲೈನ್ ಅಳವಡಿಕೆ ಮತ್ತು ಇತರೆ ಅಗತ್ಯ ಪರಿಕರಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ನಮಗೆ ಹೆಚ್ಚುವರಿ ಹೈಪ್ಲೋ ಆಕ್ಸಿಜನ್ ಹಾಸಿಗೆಗಳು ಲಭ್ಯ ಆಗಲಿದ್ದು, ಭವಿಷ್ಯದ ಬಳಕೆಗೂ ಲಭ್ಯ ಆಗಲಿವೆ.
• ಹೊಸದಾಗಿ 16 – ಆರ್‌ಟಿ – ಪಿಸಿಆರ್ ಮತ್ತು 15- ಆಟೋಮೇಟೆಡ್ ಆರ್‌ಎನ್‌ಎ ಎಕ್ಸಟ್ರಾಕ್ಷನ್ ಲ್ಯಾಬ್ ಸ್ಥಾಪನೆಗೂ ಅನುಮೋದನೆ ನೀಡಲಾಗಿದೆ. ಇದರಿಂದ ಈಗ ಲಭ್ಯವಿರುವ ಲ್ಯಾಬ್‌ಗಳ ಜತೆಗೆ ಹೆಚ್ಚುವರಿಯಾಗಿ ಸೇಪ೯ಡೆ ಆಗಲಿವೆ. ಟೆಸ್ಟ್‌ಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದ್ದು ದಿನಕ್ಕೆ ಐವತ್ತು ಸಾವಿರ ಟೆಸ್ಟ್‌ಗಳ ಗುರಿ ತಲುಪಲು ಸಾಧ್ಯವಾಗಲಿದೆ.
• ಆಯುಷ್ ವೈದ್ಯರಿಗೆ ನೀಡುತ್ತಿರುವ ವೇತನ ನಲವತ್ತೆಂಟು ಸಾವಿರಕ್ಕೆ, ಎಂಬಿಬಿಎಸ್ ವೈದ್ಯರಿಗೆ ಎಂಬತ್ತು ಸಾವಿರಕ್ಕೆ ಹಾಗೂ ನಸ್‌೯ಗಳಿಗೆ 30 ಸಾವಿರ ರೂ.ಗಳನ್ನು ಮಾಸಿಕ ವೇತನ ನೀಡಲು ನಿಣ೯ಯಿಸಲಾಗಿದೆ. ಇದು ಆರು ತಿಂಗಳಿಗೆ ಅನ್ವಯ ಆಗಲಿದೆ.
• ಸದ್ಯ ಸಕಾ೯ರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುವ ರೆಮಿಡಿಸ್ವಿಯರ್ ಔಷಧಿಗೆ ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಹೀಗಾಗಿ ಸಕಾ೯ರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಲು ನಿಧ೯ರಿಸಲಾಗಿದೆ.
ಈಗಾಗಲೇ ಕೋವಿಡ್ ಚಿಕಿತ್ಸೆಗೆ ದರ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ನಿದಿ೯ಷ್ಟ ದೂರು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿದಾ೯ಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಒಟ್ಟಾರೆ ಐದುನೂರು ಕೋಟಿ ಮೊತ್ತದ ಖರೀದಿ ಮತ್ತು ಸೌಲಭ್ಯಗಳ ಮೇಲ್ದಜೆ೯ ಏರಿಕೆ ಕ್ರಮಗಳಿಗೆ ಟಾಸ್ಕ್‌ಫೋಸ್೯ ಸಮಿತಿ ಸಭೆ ಅನುಮೋದನೆ ನೀಡಿದೆ.