ಮೈಸೂರು,ಡಿಸೆಂಬರ್,9,2020(www.justkannada.in): ಪಿಜಿ ಆರ್ಯುವೇದದ ಶಾಲ್ಯ ಮತ್ತು ಶಾಲಕ್ಯ ಓದಿದವರು ಮಾಡಬಹುದಾದ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಅನುಮತಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೇಂದ್ರಿಯ ಭಾರತೀಯ ಔಷಧ ಪರಿಷತ್ ವಿರುದ್ದ ಐಎಂಎ ಹೋರಾಟ ನಡೆಸಲು ತೀರ್ಮಾನಿಸಿದ್ದು ಇಂದಿನಿಂದ ಮೈಸೂರಿನಲ್ಲಿ ಮುಷ್ಕರ ಆರಂಭವಾಗಿದೆ.
ಮೈಸೂರು ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವೈದ್ಯರ ಮುಷ್ಕರದ ಬಗ್ಗೆ ಮಾಹಿತಿ ನೀಡಿದ ಐಎಂಎ ಅಧ್ಯಕ್ಷ ಡಾ.ಬಿ.ಎನ್ ಆನಂದರವಿ, ಪಿಜಿ ಆರ್ಯುವೇದದ ಶಾಲ್ಯ ಮತ್ತು ಶಾಲಕ್ಯ ಓದಿದವರು ಮಾಡಬಹುದಾದ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಅನುಮತಿ ನೀಡಿರುವುದಕ್ಕೆ ವಿರೋಧಿಸಿ ಕೇಂದ್ರಿಯ ಭಾರತೀಯ ಔಷಧ ಪರಿಷತ್ ವಿರುದ್ದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಇಂದು ಮೈಸೂರು ನಗರ, ಗ್ರಾಮಾಂತರ ಪ್ರದೇಶದಲ್ಲಿರುವ ವೈದ್ಯರು ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸುತ್ತೇವೆ. ನಾಳೆ ಜೆಕೆ ಮೈದಾನದಿಂದ ಡಿಸಿ ಕಛೇರಿಯವರೆಗೂ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತದೆ ಎಂದರು.
ಹಾಗೆಯೇ ಶುಕ್ರವಾರ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿದೆ ಎಂದು ಐಎಂಎ ಅಧ್ಯಕ್ಷ ಡಾ.ಬಿ.ಎನ್ ಆನಂದರವಿ ತಿಳಿಸಿದ್ದಾರೆ.
Key words: Doctors- strike – Mysore