ಮೈಸೂರು, ಫೆ.೧೬,೨೦೨೫: ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ ತಮ್ಮ ವಿವಾಹದ ಬಳಿಕ ಮಾಧ್ಯಮಗೋಷ್ಠಿ ನಡೆಸಿ, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಜತೆಗೆ ಕುವೆಂಪು ಮಂತ್ರ ಮಾಂಗಲ್ಯದ ಜಪ ಮಾಡುತ್ತಲೇ ಶಾಸ್ತ್ರೋಕ್ತವಾಗಿ, ಅದ್ದೂರಿಯಾಗಿ ಮದುವೆಯಾದದ್ದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಡ್ರೋಲ್ ಮಾಡುತ್ತಿದ್ದವರಿಗೂ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾಲಿ ಧನಂಜಯ ಹೇಳಿದಿಷ್ಟು..
ನನ್ನ ವ್ಯಕ್ತಿತ್ವ,ನನ್ನ ಬೆಳವಣಿಗೆಗೆ ಕಾರಣವಾದ ಮೈಸೂರಿನಲ್ಲಿ ಮದುವೆಯಾಗಿದ್ದೇನೆ. ಜನರ ಅಭಿಮಾನಕ್ಕೆ ನಾನು ಎಂದೂ ಆಭಾರಿ. ಏನಾದರೂ ಸಣ್ಣಪುಟ್ಟ ತಪ್ಪುಗಳು ಆಗಿದ್ದರೆ ಕ್ಷಮಿಸಬೇಕು. ನಾನು ಓದಿ ಬೆಳದ ಊರಿನಲ್ಲಿ ನಾನು ಹೊಸ ಜೀವನಕ್ಕೆ ಕಾಲಿಟ್ಟಿದ್ದೇನೆ. ಅಭಿಮಾನಿಗಳ ಅಭಿಮಾನ ಕಂಡು ಕೆಲ ಹೊತ್ತು ಭಾವುಕನಾದೆ. ಎಲ್ಲರಿಗೂ ಧನ್ಯವಾದಗಳು ಎಂದು ಅಭಿನಂದನೆ ತಿಳಿಸಿದ ನವ ದಂಪತಿ.
ಮದುವೆ ಬಳಿಕ ಮೈಸೂರಲ್ಲೇ ವಾಸ್ತವ್ಯ ಹೂಡುತ್ತೀರಾ..? ಎಂಬ ಪ್ರಶ್ನೆಗೆ ಡಾಲಿ ಧನಂಜಯ್ ಪ್ರತಿಕ್ರಿಯೆ. ಹಾಗೇನಿಲ್ಲ ಬೇಕು ಅಂದಾಗಲೆಲ್ಲ ಬಂದು ಹೋಗುತ್ತೇನೆ. ಬೆಂಗಳೂರಿಂದ ಒಂದು ಗಂಟೆ ಜರ್ನಿ ಅಷ್ಟೇ ಬರಬಹುದು. ಮೈಸೂರು ಅಂದರೆ ಯಾವಾಗಲೂ ಒಂದು ತರ ಎಮೋಷನ್ ಇದ್ದೇ ಇರುತ್ತದೆ. ಸದ್ಯಕ್ಕೆ ಒಂದು ಸಣ್ಣ ಬ್ರೇಕ್ ಪಡೆದು ಮಾರ್ಚ್ ನಿಂದ ಶೂಟಿಂಗ್ ಆರಂಭಿಸುತ್ತೇನೆ ಎಂದ ಡಾಲಿ ಧನಂಜಯ್.
ಇಷ್ಟೊಂದು ಜನ ನಾನು ಯಾವತ್ತೂ ನೋಡಿರಲಿಲ್ಲ. ಇಷ್ಟೊಂದು ಪ್ರಿತಿ,ಇಷ್ಟೊಂದು ಆಶೀರ್ವಾದ ನೋಡಿ ಬಹಳ ಸಂತೋಷವಾಗಿದೆ. ಏನು ಹೇಳಬೇಕು ಅಂತ ಗೊತ್ತಾಗುತಿಲ್ಲ. ನಾನು ಒಬ್ಬ ವೈದ್ಯಳಾಗಿ ಸಾಮಾಜಿಕ ಸೇವೆಯಲ್ಲಿದ್ದೆ ಈಗ ಒಬ್ಬ ಕಲಾವಿಧನ ಹೆಂಡತಿಯಾಗಿ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಮದುವೆ ಮುಗಿದ ಬಳಿ ಸುದ್ದಿ ಗೋಷ್ಠಿಯ ಮೂಲಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಧನ್ಯತಾ.
ಟ್ರೋಲಿಗರಿಗೆ ಸ್ಪಷ್ಟನೆ:
ಆಸ್ತಿಕತೆ ನಾಸ್ತಿಕತೆ ಯಾವಾಗಲೂ ಬೇರೆ ಬೇರೆ. ಮೌಡ್ಯಗಳೇ ಬೇರೆ,ಆಚರಣೆಗಳೇ ಬೇರೆ. ಕೊಂಡ ಹಾಯ್ದಿದ್ದು ಅದು ನಾನು ಬಾಲ್ಯದಿಂದಲೂ ನೋಡಿಕೊಂಡು ಬಂದಿದ್ದೇನೆ. ಅದು ನಮ್ಮ ಜನಪದ ಅದು ನಮ್ಮನಂಬಿಕೆ. ಎಲ್ಲರ ನಂಬಿಕೆಗೆ ನಾವು ದಕ್ಕೆ ಮಾಡಬಾರದು. ನಮ್ಮ ಮನೆಯವರ ನಂಬಿಕೆಗೆ ದಕ್ಕೆ ಮಾಡಬಾರದು. ನನ್ನ ತಾಯಿ ಅನಾರೋಗ್ಯಕ್ಕೆ ಒಳಗಾದಾಗ ಅವರು ಜೇನುಕಲ್ಲು ಸಿದ್ದಪ್ಪನಿಗೆ ಹರಕೆ ಒತ್ತುಕೊಂಡಿದ್ರು ಅದೊಂದು ಪಾಸಿಟಿವ್ ಎನರ್ಜಿ. ಅದು ಸೈನ್ಸ್ ಎಂದು ನನಗೆ ಗೊತ್ತು,ವೈದ್ಯರಿಗೂ ಗೊತ್ತು. ಜನ ಸಾಮಾನ್ಯರಲ್ಲಿರುವ ಆ ನಂಬಿಕೆ ಗೌರವಿಸಬೇಕು ಹಾಗಾಗಿ ನಾನು ಕೆಲವೊಂದು ಶಾಸ್ತ್ರಗಳಲ್ಲೂ ಭಾಗಿಯಾಗಿದ್ದೆ. ಮದುವೆ ಬಳಿಕ ಮಾಧ್ಯಮಗಳ ಮೂಲಕ ಟ್ರೋಲಿಗರಿಗೆ ಡಾಲಿ ಧನಂಜಯ್ ಪ್ರತಿಕ್ರಿಯೆ.
key words: wedding, Dolly Dhananjaya, thanked, fans, trolls.
SUMMARY:
After the wedding, Dolly thanked his fans and clarified to the trolls.