ನವದೆಹಲಿ,ಫೆ,25,2020(www.justkannada.in): ಎರಡು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ರಾಜ್ ಘಾಟ್ ನಲ್ಲಿರುವ ಮಹಾತ್ಮ ಗಾಂಧಿಸ್ಮಾರಕಕ್ಕೆ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಪುಷ್ಪ ನಮನ ಸಲ್ಲಿಸಿದರು. ರಾಜ್ ಘಾಟ್ ಗೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್, ದೂರದೃಷ್ಠಿ ನಾಯಕ ಮಹಾತ್ಮ ಗಾಂಧೀಜಿ ಭಾರತ ಇದು. ಸಾರ್ವಭೌಮ ಭಾರತದ ಜತೆ ಯಾವಾಗಲೂ ಅಮೇರಿಕಾ ನಿಲ್ಲುತ್ತದೆ. ಯಾವಾಗಲೂ ಭಾರತದ ಜತೆ ನಾವಿದ್ದೇವೆ. ನಮಗೆ ಸಿಕ್ಕಂತಹ ಅಗಾದ ಪ್ರಚಂಡ ಗೌರವವಿದು ಎಂದು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್ ಭವನಕ್ಕೆ ತೆರಳಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಡೊನಾಲ್ಡ್ ಟ್ರಂಪ್ ಆಗಮಿಸಲಿದ್ದಾರೆ. ಈ ವೇಳೆ ರಕಜ್ಷಣೆ ಭಯೋತ್ಪಾದನೆ ಜಾಗತಿಕ ಶಾಂತಿ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಸಮಯದಲ್ಲಿ ಉಭಯ ದೇಶಗಳ ನಡುವೆ ಒಪ್ಪಂದವಾಗಲಿದೆ ಎನ್ನಲಾಗುತ್ತಿದೆ.
Key words: Donald Trump -Mahatma Gandhi -memorial – Rajghat-visitor’s book.