ಮೈಸೂರು,ಡಿಸೆಂಬರ್,8,2022(www.justkannada.in): ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಗುಜರಾತ್ ಫಲಿತಾಂಶ ಕರ್ನಾಟಕಕ್ಕೆ ಹೋಲಿಸಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಸುಮ್ಮನಿದ್ದರೂ ಗೆಲ್ಲುತ್ತದೆ ಎಂದು ವಿಪಕ್ಷ ನಾಯಕರ ಸಿದ್ಧರಾಮಯ್ಯ ಹೇಳಿದರು.
ಗುಜರಾತ್ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಣಾಮ ಬೀರಲ್ಲ. ಅಮ್ ಆದ್ಮಿ ಪಕ್ಷಕ್ಕೆ ಬಿಜೆಪಿಯೇ ಫಂಡಿಂಗ್ ಮಾಡಿದೆ. ಗುಜರಾತ್ ನಲ್ಲಿ ಬಿಜೆಪಿಯೇ ಗೆಲ್ಲುತ್ತೆ ಎಂಬ ನಿರೀಕ್ಷೆ ಇತ್ತು. ಒಂದು ರಾಜ್ಯದ ಫಲಿತಾಂಶದ ಗಾಳಿ ಇನ್ನೊಂದು ರಾಜ್ಯಕ್ಕೆ ಬೀರಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆ ಶಕ್ತಿಯುತವಾಗಿದೆ. ಕರ್ನಾಟಕದಲ್ಲಿ ಇರೋದು ಭ್ರಷ್ಟ ಸರ್ಕಾರ. ಕರ್ನಾಟಕದಲ್ಲಿ ಸೋಲುತ್ತೇವೆ ಎಂಬ ಭಯ ಬಿಜೆಪಿಗೆ ಇದೆ ಎಂದರು.
ಗುಜರಾತ್ ನಲ್ಲಿ ಆಪ್ ಗೆ ಬಿಜೆಪಿ ಫಂಡಿಗ್ ಮಾಡಿದೆ. ಗುಜರಾತ್ ಚುನಾವಣೆಯಲ್ಲಿ ಆಪ್ ಬಹಳ ಹಣ ಖರ್ಚು ಮಾಡಿದೆ. ಅಷ್ಟು ದುಡ್ಡು ಖರ್ಚು ಮಾಡಿದರೂ ಆಪ್ ಕೇವಲ 6 ಸ್ಥಾನವಷ್ಟೆ ಗಳಿಸಿದೆ. ಅಮ್ ಆದ್ಮಿ ಪಕ್ಷದಿಂದ ಮತವಿಭಜನೆ ಆಗಿದೆ ಅಷ್ಟೆ. ಕರ್ನಾಟಕದಲ್ಲಿ ಕಾಂಗ್ರೆಸ್ ಯಾವುದೇ ತಂತ್ರಗಾರಿಕೆ ಮಾಡೊದು ಬೇಡ. ಕಾಂಗ್ರೆಸ್ ಸುಮ್ಮನಿದ್ದರೂ ಗೆಲ್ಲುತ್ತೆ. ದೇಶದಲ್ಲಿ ಮೋದಿ ಹವಾ ಇಲ್ಲ ಇದ್ದಿದ್ದರೇ ದೆಹಲಿ ಪಾಲಿಕೆಯಲ್ಲಿ ಏಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.
ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಗೆ ಪ್ಲಸ್ ಆಗಲಿದೆ . ಜೆಡಿಎಸ್ ಜೊತೆ ಬಿಜೆಪಿ ತಂತ್ರಗಾರಿಕೆ ನಡೆಸಬಹುದು ಅದು ನಡೆಯಲ್ಲ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.
Key words: Don’t -compare -Gujarat -result –with-Karnataka-Former CM -Siddaramaiah.
ENGLISH SUMMARY…
Don’t compare Gujarat elections to Karnataka: Cong. will win even if won’t work – Former CM Siddaramaiah
Mysuru, December 8, 2022 (www.justkannada.in): “The Gujarat assembly election results won’t affect the election result in Karnataka. Don’t compare Gujarat elections with Karnataka. Congress party will win in Karnataka even if we keep quiet,” observed leader of the opposition in the assembly Siddaramaiah.
Speaking in Mysuru today, Siddaramaih informed that the results of the Gujarat assembly elections won’t affect Congress in Karnataka. “The BJP has funded AAP in Gujarat. Everybody had expected that BJP would win in Gujarat. However, the result of any particular state won’t affect another. The organizing strength of Congress party is good. The present government in Karnataka is most corrupt. They also are scared that they will lose in Karnataka,” he added.
“In Gujarat the BJP has funded AAP. Though AAP spent a lot of money in Gujarat it could win only six seats. The votes of AAP has divided. There is no need to have any special strategy in Karnataka. Congress will certainly win even if keep quiet. There is no Modi wave in the country. Otherwise why would they lose in the Delhi Municipal elections,” he questioned.
The wave against the government in Himachal Pradesh will become a plus point for the Congress. In Karnataka the BJP might make a secret nexus with the JDS. However, it won’t work, Siddaramaiah observed.
Keywords: Siddaramaiah/ Gujarat election/ won’t affect Karnataka