ಬೆಂಗಳೂರು,ಡಿಸೆಂಬರ್,30,2022(www.justkannada.in): ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯ ಮೀಸಲಾತಿಗಾಗಿ ಒತ್ತಾಯಿಸಿದ ಬೆನ್ನಲ್ಲೆ ಸರ್ಕಾರ ಎರಡು ಹೊಸ ಕ್ಯಾಟಗರಿ ಸೃಷ್ಠಿ ಮಾಡಿ ಮೀಸಲಾತಿ ನೀಡಲು ಮುಂದಾಗಿದೆ. ಈ ಕುರಿತು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಕುರಿತು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಮೀಸಲಾತಿ ಬಗ್ಗೆ ಯಾವುದೇ ಅನುಮಾನ ಬೇಡ. ಹೊಸ ಮೀಸಲಾತಿಯಿಂದ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗಲಿದೆ. 2ಸಿ 2 ಡಿ ಕ್ಯಾಟಗರಿಗೆ ಶಿಕ್ಷಣ ಔದ್ಯೋಗಿಕ ಮಿಸಲಾತಿ ಸಿಗಲಿದೆ. ಯಾರಿಗೂ ಸಮಸ್ಯೆಯಾಗದಂತೆ ಕ್ಯಾಟಗರಿ ಸೃಷ್ಠಸಲಾಗಿದೆ. ಕಾನುನೂ ತೊಡಗು ಬಾರದಂತೆ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಲಿಂಗಾಯತ ಸಮುದಾಯಕ್ಕೆ 2ಡಿ ಕ್ಯಾಟಗಿರಿ ಹಾಗೂ ಒಕ್ಕಲಿಗ ಸಮುದಾಯಕ್ಕೆ 2ಸಿ ಕ್ಯಾಟಗಿರನ್ನು ರಚನೆ ಮಾಡಲು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
Key words: Don’t- doubts- about –reservation- Minister -R. Ashok.