ಬೆಂಗಳೂರು,ಮಾ,3,2020(www.justkannada.in): ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬೇಕು ಇಲ್ಲದಿದ್ದರೇ ಸಂವಿಧಾನ ವಿಚಾರದ ಬಗ್ಗೆ ಚರ್ಚೆಯಲ್ಲಿ ನಾವು ಭಾಗವಹಿಸಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಬಹಿರಂಗ ಎಚ್ಚರಿಕೆ ನೀಡಿದರು.
ಯತ್ನಾಳ್ ಹೇಳಿಕೆ ಖಂಡಿಸಿ ಸದನದಲ್ಲಿ ವಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಧರಣಿ ಮುಂದುವರೆದಿದೆ. ಈ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕ್ರಮಕ್ಕೆ ಆಗ್ರಹಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ಕೊಡಬೇಕು. ಚರ್ಚೆಗೆ ಅವಕಾಶ ನೀಡದ ಹೊರತು ಸಂವಿಧಾನ ವಿಚಾರ ಚರ್ಚೆಗೆ ಭಾಗವಹಿಸಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.
ದೊರೆಸ್ವಾಮಿ ಬಗ್ಗೆ ಯತ್ನಾಳ್ ಹೇಳಿಕೆ ಇದು ಸಂವಿಧಾನ ವಿರೋಧಿ ಅಲ್ವಾ..? ಇದು ಯತ್ನಾಳ್ ತಾವು ತೆಗೆದುಕೊಂಡಿದ್ದ ಮತ ಹಾಗೂ ಮೂಲಭೂತ ಕರ್ತವ್ಯಕ್ಕೆ ಮಾಡಿದ ಅಪಮಾನ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ನಿಷ್ಟೆ ಇಲ್ಲ. ಯತ್ನಾಳ್ ಹೇಳಿಕೆ ವಿಚಾರ ಸದನದಲ್ಲಿ ಚರ್ಚೆಯಾಗಬೇಕು. ಯತ್ನಾಳ್ ಉಚ್ಛಾಟಿಸಬೇಕು. ಅಲ್ಲಿವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
Key words: doreswamy- MLA-Basanagowda patil Yatnal- statement -Opposition leader -Siddaramaiah –warning-government.