ಮೈಸೂರು,ನವೆಂಬರ್,27,2020(www.justkannada.in): ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ಐಎಎಸ್ ಬಗ್ಗೆ ಎಂಎಲ್ ಸಿ ರಘು ಆಚಾರ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿಗೆ 3ನೇ ಮಹಾರಾಣಿ ಬೇಡ ಎಂದಿದ್ದ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಅವರಿಗೆ ಪತ್ರ ಬರೆದು ತಿರುಗೇಟು ನೀಡಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಂದು ಕಾಂಗ್ರೆಸ್ ಶಾಸಕರು ಮೈಸೂರಿನಲ್ಲಿ ಜಂಟಿ ಸುದ್ಧಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂಎಲ್ ಸಿ ರಘು ಆಚಾರ್, ರೋಹಿಣಿ ಐಎಎಸ್ ಪಾಸ್ ಆಗೀದ್ದಾರಾ ಅನ್ನೋದೆ ಡೌಟು. ನೀವು 100% ಐ ಎಎಸ್ ಪಾಸ್ ಆಗಿದ್ರೆ ಮಿನಿಮಮ್ ನಾಲೆಡ್ಜ್ ಇರಬೇಕಲ್ವಾ. ನೀವು ಆಡಳಿತ ನಡೆಸಿವುದು ನಿಮ್ಮ ಜವಾಬ್ದಾರಿ. ನಿಮಗೆ ಕಾನೂನು ಗೊತ್ತಿರಬೇಕಲ್ವೆ.? ಶಾಸಕರನ್ನು ಬಿಟ್ಟು ಸರ್ಕಾರಿ ಕೆಲಸ ಮಾಡೋದು ಕಾನೂನಿನಲ್ಲಿ ಇದೆಯಾ ಗೊತ್ತಿಲ್ಲ. ಶಾಸಕಾಂಗಕ್ಕಿಂತ ದೊಡ್ಡವರ ಇವರು ಎಂದು ಕಿಡಿಕಾರಿದರು.
ಹಾಗೆಯೇ ಶಾಸಕ ಹೆಚ್.ಪಿ ಮಂಜುನಾಥ್ ಅವರಿಗೆ ಬರೆದ ಪತ್ರ ವೈರಲ್ ಆದ ಕುರಿತು ಮಾತನಾಡಿದ ರಘು ಆಚಾರ್, ನಿಮ್ಮ ಆಫೀಸ್ ನಿಂದ ನಿಮ್ಮ ಪತ್ರ ಹೇಗೆ ಲೀಕ್ ಆಯ್ತು. ನಿಮ್ಮ ಆಫೀಸರ್ ಲೀಕ್ ಮಾಡಿದ್ರಾ? ಅಥವಾ ನೀವು ಮಾಡಿದ್ರಾ ? ಇದು ಗೊತ್ತಾಗಬೇಕು. ಇದು ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು. ನಿಮ್ ಕೆಲಸ ನೀವ್ ಮಾಡಿ. ನಮ್ಮ ಕೆಲಸ ನಾವ್ ಮಾಡ್ತೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗುಡುಗಿದರು.
ಹಕ್ಕುಚ್ಯುತಿ ಮಂಡಿಸುವೆ…
ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ಇದನ್ನು ಪರಿಷತ್‌ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇನ್ನು ಎರಡು ದಿನದಲ್ಲಿ ಅವರು ಕ್ಷಮೆ ಕೇಳಬೇಕು. ಅಥವಾ ಆ ಪತ್ರ ಹೇಗೆ ಹೊರಗೆ ಬಂತು ? ಇದನ್ನು ಬಹಿರಂಗಪಡಿಸಬೇಕು. 7ನೇ ತಾರೀಖು ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ. ಪರಿಷತ್ ವಿಧಾನಸಭೆಗೆ ಬಂದು ಉತ್ತರ ಕೊಡಲಿ ಎಂದು ರಘು ಆಚಾರ್ ತಿಳಿಸಿದರು.
ಶೋ ಮಾಡಿಕೊಂಡು ರಥ ಎಳೆದುಕೊಂಡು ಇದ್ದೀರಾ ? ಎಂದು ಟೀಕಿಸಿದ ರಘು ಆಚಾರ್, ಕೋವಿಡ್ ನೀವು ಒಬ್ಬರೆ ನಿರ್ವಹಣೆ ಮಾಡುತ್ತಿಲ್ಲ. ನೀವು ಅದರ ಒಂದು ಭಾಗ ಅಷ್ಟೇ. ಈ ತರದವರು ಡಿಸಿ ಆದರೆ ದೇವರೆ ಕಾಪಾಡಬೇಕು. ರಾಜ್ಯಾಂಗ ಕಾರ್ಯಾಂಗ ನ್ಯಾಯಾಂಗದ ಬಗ್ಗೆ ಓದಿ, ಈಗ ಓದಿರುವುದೆಲ್ಲವನ್ನು ಮರೆತುಬಿಟ್ಟಿದ್ದಾರೆ. ಅದನ್ನು ಮತ್ತೆ ಓದಿ ತಿಳಿದುಕೊಳ್ಳಿ ಎಂದು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ದ ವಾಗ್ದಾಳಿ ನಡೆಸಿದರು.
Key words: Doubts –mysore DC- Rohini Sindhuri –IAS-MLC -Raghu Achar