ಮೈಸೂರು ಏಪ್ರಿಲ್ ,29,2025 (www.justkannada.in): ರಾಷ್ಟ್ರೀಯ ಮಹಿಳಾ ಆಯೋಗವು ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಧ್ವನಿಯಾಗಿ ನಿಲ್ಲುತ್ತದೆ. ಅಂತಹ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಮಹಿಳಾ ಆಯೋಗದ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಡಾ. ಅರ್ಚನಾ ಮಜುಂದಾರ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಹಿಳಾ ಆಯೋಗ ನಿಮ್ಮ ಮನೆ ಬಾಗಿಲಿಗೆ ಎಂಬ ಮಹಿಳೆಯರ ಅಹವಾಲು ಆಲಿಸಲು ಸಾರ್ವಜನಿಕರ ಅರ್ಜಿ ವಿಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟೀಯ ಮಹಿಳಾ ಆಯೋಗದಲ್ಲಿ 40 ಸಾವಿರ ಪ್ರಕರಣಗಳು ಇವೆ. ಮಹಿಳಾ ಆಯೋಗವು ಮಹಿಳೆಯರಿಗೆ ಪರವಾದ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದರು.
ಮಹಿಳೆಯು ಮನವಿ ಮಾಡಿ ನಾನು 2021 ರಲ್ಲಿ ಮದುವೆ ಆಗಿತ್ತು. ನನಗೂ ನನ್ನ ಗಂಡನಾಗಿ ಹೊಂದಾಣಿಕೆ ಆಗದೆ ಕೋರ್ಟಿನಲ್ಲಿ ಇದೆ. ಆದರೆ ನನಗೆ ಯಾವುದೇ ಮೆಂಟೆನೆನ್ ಸಿಕ್ಕಿಲ್ಲ. ನನಗೆ ಜೀವನ ಮಾಡಲು ಕಷ್ಟವಾಗುತ್ತಿದೆ. ನಮ್ಮ ಲಾಯರ್ ಕಳುಹಿಸುವ ನೋಟಿಸ್ ನ್ನು ನನ್ನ ಗಂಡ ಪಡೆದುಕೊಳ್ಳುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಅರ್ಚನಾ ಮಜುಂದಾರ್, ನಮ್ಮ ಕಡೆಯಿಂದ ವಕೀಲರ ನೇಮಿಸಲಾಗುವುದು. ಅವರು ಉಚಿತವಾಗಿ ಕಾನೂನು ಸೇವೆ ನೀಡುವರು ಎಂದು ತಿಳಿಸಿದರು.
ನಾನು ಅಂಗನವಾಡಿ ಮಹಿಳಾ ಸಹಾಯಕಿ ಆಗಿ ಅಶೋಕಪುರಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಾ ಇದ್ದು ನಾನು ಎಸ್ ಎಸ್ ಎಲ್ ಸಿ ಓದಿರುತ್ತೇನೆ ನನಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಬಡ್ತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಅವರ ಕಡತವನ್ನು ತಮ್ಮ ಬಳಿ ತರುವಂತೆ ಹಾಗೂ ಪರಿಶೀಲಿಸಿ ಅರ್ಹತೆ ಇದ್ದರೆ ಬಡ್ತಿ ನೀಡಿಸುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಹಲವು ಪ್ರಕರಣಗಳ ಕುರಿತು ಮಾಹಿತಿ ಪಡೆದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಡಾ. ಅರ್ಚನಾ ಮಜುಂದಾರ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾದ ಗೀತಾ ಹೆಚ್, ಜೆ, ಗೀತಾ ಎನ್ ಶೀಲಾ, ಗಾಯತ್ರಿ, ರೂಪಾಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Mysore, National Women’s Commission, Dr. Archana Majumdar