ಮೈಸೂರು,ಸೆಪ್ಟಂಬರ್,4,2021(www.justkannada.in): ಡಾ.ಬಾಬೂ ಜಗಜೀವನರಾಮ್ ಭಾರತ ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ಧಿ. ಇವರು ಶೋಷಿತರು ಹಾಗೂ ದಲಿತರ ಧ್ವನಿಯಾಗಿದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬಣ್ಣಿಸಿದರು.
ಮೈಸೂರು ವಿಶ್ವವಿದ್ಯಾನಿಲಯ, ಡಾ.ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ‘ಯಶಸ್ಸಿನ ಪ್ರತೀಕ ಬಾಬೂ ಜಗಜೀವನರಾಮ್’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಭಾರತದ ರೂವಾರಿಗಳಲ್ಲಿ ಬಾಬೂಜಿ ಕೂಡ ಇಬ್ಬರು. ಮಹಾತ್ಮಾ ಗಾಂಧೀಜಿ ಅವರಿಂದ ಹೊಗಳಿಸಿಕೊಂಡಿದ್ದರು. ದೇಶಕ್ಕಾಗಿ ದುಡಿದ ಯಾವುದೇ ಮಹನೀಯರನ್ನು ಜಾತಿಯ ನೆಲೆಯಲ್ಲಿ ಗುರುತಿಸುವುದು ದುರಂತ. ಜಗಜೀವನ್ ರಾಮ್ ಒಬ್ಬ ಮಹಾನ್ ಸಂಘಟಕ, ಚಿಂತಕ ಮತ್ತು ರಾಜಕೀಯ ಮುತ್ಸದ್ಧಿಯಾಗಿ ದೇಶಕ್ಕೆ ಬೆಳಕನ್ನು ನೀಡಿದವರು. ಶೋಷಿತರ ಸಮಾಜದಿಂದ ಬಂದವರಿಗೆ ಮಾನವೀಯತೆ, ಹೃದಯವಂತಿಕೆ ಮತ್ತು ಸಮಾಜವನ್ನು ಮುನ್ನಡೆಸುವ ಚಿಂತನೆ ಇರುತ್ತದೆ ಎಂಬುದಕ್ಕೆ ಬಾಬೂಜಿ ಸಾಕ್ಷಿಯಾಗಿದ್ದಾರೆ ಎಂದರು.
ಡಾ.ಬಾಬೂ ಜಗಜೀವನರಾಮ್ ಅವರು ರಾಷ್ಟ್ರೀಯ ನಾಯಕರಾಗಿ, ಶ್ರೇಷ್ಠ ಸಂಸದೀಯ ಪಟುವಾಗಿ, ಕೇಂದ್ರ ಮಂತ್ರಿ, ಉಪ ಪ್ರಧಾನಿ ಹಾಗೂ ದಲಿತ ಸಮುದಾಯಗಳ ಆಶಾಕಿರಣವಾಗಿ ಸುಮಾರು ಅರ್ಧ ಶತಮಾನಗಳ ಕಾಲ ಭಾರತದ ರಾಜಕಾರಣದ ಮೇಲೆ ತಮ್ಮ ಇರುವನ್ನು ಬಲವಾಗಿ ಪ್ರತಿಪಾದಿಸಿದರು. ಆದರ್ಶ, ವೌಲ್ಯಭರಿತ ವಿಚಾರಗಳನ್ನು ತಮ್ಮ ರಾಜಕೀಯ ನಾಯಕತ್ವಕ್ಕೆ ಬೆರೆಸಿ ಭಾರತವನ್ನು ರಾಜಕೀಯ ಸಾಂವಿಧಾನಿಕ ಬೆಳವಣಿಗೆ ಮತ್ತು ಸಾಮಾಜಿಕ ಬದಲಾವಣೆ ತರಲು ಹಗಲಿರುಳು ಶ್ರಮಿಸಿದರು. ಹಲವು ಬಾರಿ ಸೆರೆಮನೆ ವಾಸ ಅನುಭವಿಸಿದರು ಹೋರಾಟದ ಕಿಚ್ಚನ್ನು ಬತ್ತಿಸಿಕೊಳ್ಳಲಿಲ್ಲ. ಹಿಂದೂ ಧರ್ಮದಲ್ಲಿದ್ದುಕೊಂಡೇ ಭಾರತದಲ್ಲಿ ಸಮ ಸಮಾಜವನ್ನು ಸ್ಥಾಪಿಸುವ ಮೂಲಕ ಅಸ್ಪೃಶ್ಯರನ್ನು ಹಾಗೂ ಭಾರತದ ಸಮಸ್ತ ಶೋಷಿತ ಸಮೂಹಗಳನ್ನು ವಿಮೋಚನೆಗೊಳಿಸಬೇಕೆಂದು ಪ್ರಯತ್ನಿಸಿದರು ಎಂದು ಹೇಳಿದರು.
ಧೀಮಂತ ರಾಷ್ಟ್ರನಾಯಕನ ನೆನಪು ಸದಾ ಹಸುರಾಗಿರಬೇಕು ಮತ್ತು ಅವರ ಚಿಂತನೆಗಳು ಮುಂದಿನ ಜನಾಂಗಕ್ಕೆ ಮಾರ್ಗದರ್ಶಿಯಾಗಿರಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರಕಾರ ಉದಾರ ನೆರವಿನೊಡನೆ ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಪೀಠವನ್ನು ಮೈಸೂರು ವಿಶ್ವವಿದ್ಯಾಲಯ 2001ರಲ್ಲಿ ಸ್ಥಾಪನೆಗೊಂಡಿದೆ. ಈ ಕೇಂದ್ರದ ಆಶ್ರಯದಲ್ಲಿ ಬಾಬೂಜೀಯವರನ್ನು ಕುರಿತಂತೆ ಅಧ್ಯಯನ ಮತ್ತು ಸಂಶೋಧನ ಕಾರ್ಯಗಳು ನಡೆಯುತ್ತಿವೆ ಎಂದರು.
ಡಾ.ಬಾಬೂ ಜಗಜೀವನರಾಮ್ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ ಮಾತನಾಡಿ, ಬಾಬೂಜೀ ಕುರಿತಾಗಿ ಐದು ಸಂಪುಟಗಳನ್ನು ಸಿದ್ಧಪಡಿಸಲಾಗಿದೆ. ಅದರ ಬಿಡುಗಡೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿ ಪ್ರೊ.ಜಿ.ಹೇಮಂತ್ ಕುಮಾರ್, ಶೀಘ್ರ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ರಾಮಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅಧ್ಯಕ್ಷ ಪ್ರೊ ಜೆ.ಸೋಮಶೇಖರ್, ಸಂಶೋಧನಾಧಿಕಾರಿ ಎಂ.ಶ್ರೀನಿವಾಸ ಇದ್ದರು.
ENGLISH SUMMARY…
Dr. Babu Jagjivanram was a voice of the downtrodden: UoM VC
Mysuru, Sept. 4, 2021 (www.justkannada.in): “Dr. Babu Jagjivanram is one of the greatest politicians India has ever seen. He was the voice of the downtrodden,” opined Prof. G. Hemanth Kumar, Vice-Chancellor, University of Mysore.
He inaugurated the one-day seminar on the topic, “Babu Jagjivanram a symbol of success,” organized by the Dr. Babu Jagjivanram Study, Research and Extension Center, University of Mysore. In his address, he said, “Babu Jagjivanram was one among the pioneers of modern India. He was the person who was appreciated by Mahatma Gandhiji. It is a disaster to identify any leader or freedom fighter by his or her caste. Babu Jagjivanram was a great organizer, reformer, and political stalwart. His thoughts are guidance for all of us. People who come from the exploited class will have humanity, service-mindedness and thoughts of leading the society and Babu Jagjivanram was an example for it,” he added.
Prof. C. Ramaswamy, Guest Professor, Prof. J. Somashekar, President, Dr. B.R. Ambedkar Research and Extension Center and M. Srinivas, Research Officer were present.
Keywords: University of Mysore/ Prof.G. Hemanth Kumar/ seminar/ Babu Jagjivanram
Key words: Dr. Babu Jagjivanaram – voice – exploited-Mysore university- VC-Prof G Hemanth Kumar