ತುಮಕೂರು,ಜನವರಿ,22,2025 (www.justkannada.in): ತ್ಯಾಗದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈಗಿನ ಸಮಾಜದಲ್ಲಿ ತ್ಯಾಗದ ಮನೋಭಾವ ಕಡಿಮೆ ಆಗಿದೆ. ಸಹಜವಾಗಿ ಕಾಂಗ್ರೆಸ್ ನಲ್ಲೂ ತ್ಯಾಗದ ಮನೋಭಾವ ಕಡಿಮೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳ ಜೊತೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ತ್ಯಾಗದ ಮನೋಭಾವ ಕುರಿತು ಮಲ್ಲಿಕಾರ್ಜುನ ಅವರು ಹೇಳಿದ್ದು ನನಗೂ ಅರ್ಥವಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ಸಿಗರಲ್ಲಿದ್ದ ತ್ಯಾಗದ ಮನೋಭಾವನೆ ಬಗ್ಗೆ ಖರ್ಗೆ ಅವರು ಮಾತಾಡಿರಬಹುದು, ಮೋತಿಲಾಲ್ ನೆಹರೂರವರು ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿದ್ದರು, ಈಗಿನ ಸಮಾಜದಲ್ಲಿ ತ್ಯಾಗದ ಮನೋಭಾವನೆ ಕಮ್ಮಿಯಾಗಿದೆ. ಕೇವಲ ಕಾಂಗ್ರೆಸ್ಸಿಗರನ್ನು ದೂರುವುದು ಸರಿಯಲ್ಲ ಎಂದರು.
ಮುಂದಿನ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಪರಮೇಶ್ವರ್, ಯಾವುದೇ ರಾಜಕೀಯದ ಬಗ್ಗೆ ಮಾತನಾಡಲ್ಲ ಎಂದರು.
Key words: sacrifice, decreased, Congress, Minister, Dr. G. Parameshwar