ಲೋಕಾಯುಕ್ತ ಸಂಸ್ಥೆ ಮೇಲೆ ಹೈಕೋರ್ಟ್ ವಿಶ್ವಾಸವಿಟ್ಟು ಆದೇಶ ನೀಡಿದೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಫೆಬ್ರವರಿ ,7,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನ ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಿಸಿರುವ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕಾಯುಕ್ತ ತನಿಖೆ ಮೇಲೆ ವಿಶ್ವಾಸವಿಟ್ಟು ಹೈಕೋರ್ಟ್ ಈ ಆದೇಶ ನೀಡದಂತೆ ಕಾಣುತ್ತಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್,  ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾಗಿದೆ ಎಂಬ ದೃಷ್ಟಿಯಲ್ಲಿ ಕೋರ್ಟ್ ಆದೇಶ ನೀಡಿದೆ.  ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತಹ ಅಂಶಗಳು ಇರಲಿಲ್ಲ. ಲೋಕಾಯುಕ್ತ ಸಂಸ್ಥೆಯ ಮೇಲೆ ಹೈಕೋರ್ಟ್ ವಿಶ್ವಾಸವಿಟ್ಟು ಈ ರೀತಿಯ ಆದೇಶ  ನೀಡಿದೆ ಎಂದರು.

ದೂರುದಾರರು ಹೈಕೋರ್ಟ್ ಆದೇಶ ಪ್ರಶ್ನಿಸಿ ಬೇಕಾದರೆ ಸುಪ್ರೀಂಕೋರ್ಟ್ ಮೊರೆ ಹೋಗಲಿ. ನಮ್ಮ‌ ಕಾನೂನು ತಂಡ ಪರಿಶೀಲಿಸಿ ಅದಕ್ಕೆ ಉತ್ತರ ನೀಡುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ವಾಭಾವಿಕವಾಗಿ ನ್ಯಾಯಯುತವಾಗಿ ಇರುತ್ತವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಎಂದರು.

Key words: muda case,  High Court,  Lokayukta, Minister, Dr. G. Parameshwar