ವಿದೇಶಿ ಮಹಿಳೆ  ಸೇರಿ ಇಬ್ಬರ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಮಾರ್ಚ್,9,2025 (www.justkannada.in): ಕೊಪ್ಪಳ ಬಳಿ ವಿದೇಶ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಂಗಭದ್ರ ಎಡದಂಡೆ ಕಾಲುವೆ ಬಳಿ  ಪ್ರವಾಸಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣ ಸಂಬಂಧ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ವಿದೇಶಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಾದ ಮಲ್ಲೇಶ್  ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತೊಬ್ಬ ಆರೋಪಿ ಸಾಯಿರಾಮ್ ತಲೆಮರಿಸಿಕೊಂಡಿದ್ದಾನೆ.  3ನೇ ಆರೋಪಿ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ . ವಿಷಯ ಗೊತ್ತಾದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದಾರೆ ಈ ಘಟನೆಯನ್ನ ಯಾರು ಊಹೆ ಮಾಡಿರಲಿಲ್ಲ. ನಾಲ್ವರು ಪ್ರವಾಸಿಗರ ಪೈಕಿ ಓರ್ವ  ಮೃತಪಟ್ಟಿದ್ದಾರೆ. ಆರೋಪಿಗಳ ಹೇಳಿಕೆ ಪಡೆಯಲಾಗಿದೆ. ತನಿಖೆ ಮುಂದುವರೆಯುತ್ತಿದೆ ಎಂದರು.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಇಸ್ರೇಲಿ ಪ್ರವಾಸಿ ಮತ್ತು ಇತರ ಮೂವರು ಪುರುಷ ಪ್ರವಾಸಿಗರು ತಂಗಿದ್ದ ಹೋಂಸ್ಟೇಯ 29 ವರ್ಷದ ಮಹಿಳಾ ನಿರ್ವಾಹಕಿ ಪ್ರವಾಸಿಗರೊಂದಿಗೆ ತುಂಗಭದ್ರಾ ಎಡಗಂಡೆ ಕಾಲುವೆಯ ಪಕ್ಕದಲ್ಲಿ ಕುಳಿತು ಸಂಗೀತ ಆಲಿಸುತ್ತಿದ್ದರು. ಈ ವೇಳೆ ಬೈಕ್ ನಲ್ಲಿ  ಬಂದ ಮೂವರು ಪುರುಷರು ಅಲ್ಲಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಳೆಯರ  ಮೇಲೆ ಅತ್ಯಾಚಾರವೆಸಗಿ ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಿದ್ದರು ಎಂಬ ಆರೋಪವಿದೆ.

Key words: foreign woman, Rape case, Two,  arrested – Home Minister, Dr. G. Parameshwar