ಬೆಂಗಳೂರು,ಏಪ್ರಿಲ್,29,2025 (www.justkannada.in): ದೇಶದ ವಿಚಾರದಲ್ಲಿ ಕಾಂಗ್ರೆಸ್ ತ್ಯಾಗ ದೊಡ್ಡದು ಕಾಂಗ್ರೆಸ್ ಸಾಕಷ್ಟು ತ್ಯಾಗ ಮಾಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಾವು ಬೇರೆಯವರಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಪಹಲ್ಗಾಮ್ ಘಟನೆ ಬಗ್ಗೆ ಮೃದು ಧೋರಣೆ ತಳೆದಿಲ್ಲ. ಸರ್ವಪಕ್ಷ ಸಭೆಯಲ್ಲೂ ಅಭಿಪ್ರಾಯ ತಿಳಿಸಲಾಗಿದೆ. ಭದ್ರತಾ ವಿಚಾರದಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು. ಭದ್ರತೆ ವಿಚಾರದಲ್ಲಿ ಕೇಂದ್ರದ ಜೊತೆ ನಾವು ಇದ್ದೇವೆ ಎಂದು ತಿಳಿಸಿದರು.
ನಿನ್ನೆ ಎಎಸ್ ಪಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಘಟನೆ ಬಗ್ಗೆ ನಾನು ಸಂಪೂರ್ಣ ಮಾಹಿತಿ ಪಡೆದಿಲ್ಲ ಸಿಎಂ ಯಾಕೆ ಅಷ್ಟುಂದು ಸಿಟ್ಟಾದರೂ ಎಂಬ ಬಗ್ಗೆ ಕೇಳುತ್ತೇನೆ. ಸಮಾವೇಶದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿದರು. ಹೀಗಾಗಿ ಭದ್ರತಾ ವೈಪಲ್ಯಕ್ಕೆ ಸಿಟ್ಟಾಗಿರಬಹುದು ಎಂದು ತಿಳಿಸಿದರು.
Key words: sacrificed, country, Congress, Dr. G. Parameshwar