ಮೈಸೂರು: ಕೋವಿಡ್ ನಂತರದ ಮಾನಸಿಕ ಸಮಸ್ಯೆಗಳು ಹಾಗೂ ಕೋವಿಡ್ ನಂತಹ ಸಾಂಕ್ರಾಮಿಕ ರೋಗ ತರುವ ಮಾನಸಿಕ ಸಮಸ್ಯೆಗಳ ಕುರಿತು ಬೆಂಗಳೂರಿನ ಅಭಯ ನರರೋಗ-ಮಾನಸಿಕ ರೋಗಗಳ ಆಸ್ಪತ್ರೆ ಹಿರಿಯ ವೈದ್ಯಕೀಯ ನಿರ್ದೇಶಕ ಡಾ. ಎ. ಜಗದೀಶ್ ಮಾಹಿತಿ ನೀಡಲಿದ್ದಾರೆ.
ವಿಜ್ಞಾನ ಪ್ರಸಾರ್, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಹಾಗೂ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಸಹಯೋಗದೊಂದಿಗೆ ಜೂಂ ಆ್ಯಪ್ ಮೂಲಕ ಈ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು ಶುಕ್ರವಾರ, ಜೂನ್ 25, 2021 ಸಂಜೆ 7.00 ಗಂಟೆಗೆ ಜೂಮ್ ಜಾಲತಾಣದಲ್ಲಿ. https://bit.ly/3tl8aWn ID: 838 3460 8715 ಪಾಸ್ ವರ್ಡ್ : 941968 ಮೂಲಕ ಜಾಯಿನ್ ಆಗಬಹುದು.
ಕೊರೊನಾ ವೈರಸ್ಸು ತಾನು ಸೋಂಕಿದ ನೂರರಲ್ಲಿ, ಹತ್ತೋ ಇಪ್ಪತ್ತೋ ಮಂದಿಗೆ ಖಾಯಿಲೆ ಉಂಟು ಮಾಡಿರಬಹುದು. ಆದರೆ ನೂರರಲ್ಲಿ ನೂರಕ್ಕೂ ಜನರಿಗೆ ಭೀತಿ ಹುಟ್ಟಿಸಿರುವುದಂತೂ ನಿಜ. ಕೋವಿಡ್ ಗೆದ್ದು ಬಂದವರಿಗೆ ಭೀತಿ ಇರುವಷ್ಟೆ ಕೋವಿಡ್ ತಾಕದವರಿಗೂ ಇದೆ. ಮುಂದೇನು ಎನ್ನುವ ಪ್ರಶ್ನೆ ಎಲ್ಲರ ಮುಂದಿದೆ. ಇಂತಹ ಅನಿಶ್ಚಿತತೆ ತರುವ ಸಮಸ್ಯೆಗಳು ಹಲವು. ಕೋವಿಡ್ ನಂತರ ನಮ್ಮೆಲ್ಲರ ಮನಸ್ಸನ್ನು ಬಾಧಿಸುವ ಸಮಸ್ಯೆಗಳ ಬಗ್ಗೆ ಈ ವಾರ ಒಂದು ಚರ್ಚೆ. ನಾಲ್ಕು ದಶಕಗಳಿಂದ ನರರೋಗ ಹಾಗೂ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿರುವ ಡಾ. ಎ. ಜಗದೀಶ್ ಅವರು ಈ ಪ್ರಮುಖ ವಿಷಯದ ಕುರಿತು ಈ ಶುಕ್ರವಾರ ಸಂಜೆ ಕುತೂಹಲಿ ಜಾಲಗೋಷ್ಠಿಯಲ್ಲಿ ವಿವರಿಸಲಿದ್ದಾರೆ.