ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್(92) ಇನ್ನಿಲ್ಲ: ಅವರ ಶಿಕ್ಷಣ, ರಾಜಕೀಯ ಜೀವನ ಹೀಗಿತ್ತು..

ನವದೆಹಲಿ,ಡಿಸೆಂಬರ್,27,2024 (www.justkannada.in): ದೇಶದ ಹೊಸ ಆರ್ಥಿಕ ನೀತಿಯ ರೂವಾರಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್(92) ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ಉಸಿರಾಟದ ತೊಂದರೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್  ಮೃತಪಟ್ಟಿದ್ದು. ಈ ಹಿಂದೆ ಹಲವು ಬಾರಿ ಅನಾರೋಗ್ಯಕ್ಕೆ ಒಳಗಾಗಿದ್ದ ಮನಮೋಹನ್ ಸಿಂಗ್ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು.  ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ದೆಹಲಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಮನ್ ಮೋಹನ್ ಸಿಂಗ್ ಅವರು 2004 ರಿಂದ 2014 ರವರಗೆ  ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.  ಮನ್ ಮೋಹನ್ ಸಿಂಗ್ ಅವರು ಆರ್ಥಿಕ ಸುಧಾರಣೆ, ಜಾಗತೀಕರಣ ನೀತಿಗಳ ಹರಿಕಾರ ಎಂದು ಖ್ಯಾತರಾಗಿದ್ದರು.

ಗುರುಮಖ್ ಸಿಂಗ್ ಅಮೃತ್ ಕೌರ್ ದಂಪತಿಯ ಮಗನಾಗಿ 26-09-1932 ರಲ್ಲಿ ಪಂಜಾಬಿನ ಗಾಹ್ ನಲ್ಲಿ ಜನಿಸಿದ ಮನ್ ಮೋಹನ್ ಸಿಂಗ್ ಪ್ರಾಥಮಿಕ ಶಿಕ್ಷಣ ಉರ್ದುವಿನಲ್ಲಿ ಪಡೆದಿದ್ದರು. ಭಾರತ ವಿಭಜನೆ ನಂತರ 1948 ರಲ್ಲಿ ಅಮೃತಸರಕ್ಕೆ ಸ್ಥಳಾಂತರರಾಗಿದ್ದ ಮನ್ ಮೋಹನ್ ಸಿಂಗ್, ಹಿಂದೂ ಕಾಲೇಜಿನಲ್ಲಿ ಪಿಯುಸಿ ಅಧ್ಯಯನ, 1952 ರಲ್ಲಿ ಪದವಿ, 1954 ರಲ್ಲಿ ಸ್ನಾತಕೋತ್ತರ ಪದವಿ, ಕೇಂಬ್ರಿಡ್ಜ್,ಆಕ್ಸ್‌ಫರ್ಡ್ ವಿವಿಗಳಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿದ್ದರು.

1959 ರಲ್ಲಿ ಪಂಜಾಬ್ ವಿ.ವಿಯಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ 1963 ರಿಂದ 1965 ರವರಗೆ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. 1972 ರಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರರಾಗಿ ಸೇವೆ, 1776 ಹಸಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ, 1982 ರಿಂದ 1985 ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ ಸೇವೆ ಸಲ್ಲಿಕೆ ಮಾಡಿದ್ದರು.

1985 -87 ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ  1991 ರಲ್ಲಿ ಅರ್ಥ ಸಚಿವರಾಗಿ ರಾಜಕೀಯ ಜೀವನ ಆರಂಭಿಸಿದ ಮನ್ ಮೋಹನ್ ಸಿಂಗ್, ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಭಾರತವನ್ನ ಹಂತ ಹಂತವಾಗಿ ಮೇಲೇರಿಸಿದ್ದರು. 2004 ರಿಂದ 2014 ರವರಗೆ ಸತತ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶವನ್ನ ಮುನ್ನಡೆಸಿದ್ದರು.

ನೆಹರು ಬಳಿಕ ಎರಡನೇ ಬಾರಿಗೆ ಮರು ಆಯ್ಕೆಯಾದ ಮೊದಲ ಪ್ರಧಾನಿ ಮನ್ ಮೋಹನ್ ಸಿಂಗ್ ಆಗಿದ್ದರು.  1990 ರ ದಶಕದಲ್ಲಿ ಭಾರತದ ಆರ್ಥಿಕ ಇತಿಹಾಸದಲ್ಲಿ ಹೊಸ ತಿರುವಿಗೆ ಕಾರಣಕರ್ತರಾದ ಸಿಂಗ್, 1990 ರಿಂದ 1996 ರ ವರೆಗೆ ಕೇಂದ್ರ ಹಣಕಾಸು ಸಚಿವರಾಗಿದ್ದರು. ಆ ಸಂಧರ್ಭದಲ್ಲಿ ಇವರು ಮಾಡಿದ ಆರ್ಥಿಕ ಸುಧಾರಣೆ, ದೂರದೃಷ್ಟಿ ಈಗಲೂ ವಿಶ್ವ ಮನ್ನಣೆ ಸಿಕ್ಕಿದೆ. 1991 ರಿಂದ 2024 ರವರಗೆ ಮೇಲ್ಮನೆಯ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Key words: Former PM, Dr. Manmohan Singh (92), no more