ಹುಬ್ಬಳ್ಳಿ,ಡಿಸೆಂಬರ್,27,2024 (www.justkannada.in): ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತಾಪ ಸೂಚಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಡಾ.ಮನಮೋಹನ್ ಸಿಂಗ್ ಭಾರತ ರತ್ನ ಪ್ರಶಸ್ತಿಗೆ ಅರ್ಹರು. ಆರ್ಥಿಕ ತಜ್ಞರಾಗಿ ದೇಶಕ್ಕೆ ಭದ್ರ ಬುನಾದಿ ಹಾಕಿದರು . ಅವರು ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದಿದ್ದಾರೆ.
ಬ್ರಿಕ್ಸ್ ಅನ್ನೋ ಕಾನ್ಸೆಪ್ಟ್ ತಂದಿದ್ದೆ ಮನಮೋಹನ್ ಸಿಂಗ್. ಯಾವುದೇ ಪಕ್ಷ ಇರಲಿ ಅವರು ಮಾಡಿದ ಕೆಲಸ ಮುಖ್ಯ. ಇವತ್ತಿಗೂ ನಾವು ಅಟಲ್ ಬಿಹಾರಿ ವಾಜಪೇಯಿ ಅವರನ್ನ ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ಡಾ. ಮನಮೋಹನ್ ಸಿಂಗ್ ಕೂಡ. ದೇಶ ೆಲ್ಲಿವರೆಗೂ ಇರಿತ್ತೋ ಅಲ್ಲಿವರೆಗೆ ಅವರ ಕೆಲಸ ಇರುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
Key words: Dr. Manmohan Singh, ‘Bharat Ratna’ award, Minister, Santosh Lad