ಮೇರು ವ್ಯಕ್ತಿತ್ವದ ಡಾ. ನ.ರತ್ನ ಗುರುಗಳಿಗೆ ʼಗುರುʼ : AIISH ನಿರ್ದೇಶಕಿ ಡಾ.ಪುಷ್ಪಾವತಿ

The great personality 'Guru' Dr. N. Ratna: AIISH Director Dr. Pushpavathi

 

Dr. N. Ratna is popular for her studies and research conducted endogenously to solve language difficulties and hearing problems. Under his guidance, the All-India Institute of Speech and Hearing was established in 1966.

ಮೈಸೂರು, ಜೂ.19,2024: (www.justkannada.in news)  ಪಠ್ಯದಲ್ಲಿರುವ ವಿಷಯಗಳನ್ನು ಹೇಳಿ ಕೊಡುವ ಅನೇಕ ಗುರುಗಳ ನಡುವೆ, ಪಠ್ಯೇತರ ವಿಷಯಗಳನ್ನು ಬೋಧಿಸುವ ಗುರುಗಳು ಅಪರೂಪ. ಇಂಥ ಅಪರೂಪದಲ್ಲೇ ಅಪರೂಪ ನಮ್‌ ಗುರುಗಳಾದ ನ.ರತ್ನ ಸರ್.‌

ಇದಿಷ್ಟು ಹೇಳುವಷ್ಟರಲ್ಲೇ ಅವರ ಗಂಟಲು ಬಿಗಿದುಕೊಂಡು ಮಾತುಗಳು ತಡವರಿಸಿದವು. ಇದು ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ಹಾಲಿ ನಿರ್ದೇಶಕರಾದ ಡಾ.ಪುಷ್ಪಾವತಿ ಅವರು ಇಂದು ನಿಧನರಾದ , ತಮ್ಮ ನೆಚ್ಚಿನ ಗುರುಗಳಾದ ನಾ.ರತ್ನ ಅವರ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದಾಗ ಆದ ಅನುಭವ.

ಐಶ್‌ ನ ಸಂಸ್ಥಾಪಕ ನಿರ್ದೇಶಕರಾದ ಡಾ. ನ.ರತ್ನ ಅವರ ನಿಧನದ ಹಿನ್ನೆಲೆಯಲ್ಲಿ ಡಾ.ಪುಷ್ಪಾವತಿ ಅವರು ಮಾತನಾಡಿದರು..

ತಾನು 1989 ರ ಬ್ಯಾಚ್‌ ವಿದ್ಯಾರ್ಥಿ. ಆಗ ನ.ರತ್ನ ಅವರು ನನಗೆ ಗುರುಗಳು. ಅವರ ಕೊನೆ ಬ್ಯಾಚಿನ ವಿದ್ಯಾರ್ಥಿ ನಾನು ಎಂಬುದು ಹೆಮ್ಮೆ. ಅವರು ಕೇವಲ ಪಠ್ಯದಲ್ಲಿರುವ ವಿಷಯಗಳ ಬಗ್ಗೆ ಮಾತ್ರ ಪಾಠ ಮಾಡುತ್ತಿರಲಿಲ್ಲ. ಸಿಲಬಸ್‌ ನಲ್ಲಿ ಇಲ್ಲದೆ ಇರುವ ಮಾನವೀಯತೆ, ಕರುಣೆ, ಬದುಕಿನ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು. ನನಗೆ ಒಂದು ರೀತಿ ಸ್ಪೂರ್ತಿಧಾಯಕ ವ್ಯಕ್ತಿ ಅವರು ಎಂದರೆ ಅತಿಶಯೋಕ್ತಿಯಲ್ಲ. ನಾನು ಸಂಸ್ಥೆ ನಿರ್ದೇಶಕಿಯಾಗಿ ನೇಮಕಗೊಂಡಾಗ ಹಾಗೂ ನಂತರದ ನನ್ನ ಏಳಿಗೆ ನೋಡಿ ಸಂತಸ ಪಟ್ಟಿದ್ದರು.

ರಂಗಭೂಮಿ ಬಗೆಗೆ ಅವರಿಗೆ ಅತೀವವಾದ ಆಸಕ್ತಿ. ಈ ಸಲುವಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ನಮಗೂ ಈ ಕ್ಷೇತ್ರದ ಬಗೆಗೆ ಆಸಕ್ತಿ ಮೂಡುವಂತೆ ಮಾಡಿದರು.  ನನಗೆ ವೈಯಕ್ತಿಕವಾಗಿ ತಂದೆ ಸ್ಥಾನದಲ್ಲಿ ನಿಂತು ನನ್ನೆಲ್ಲಾ ಕೆಲಸ ಕಾರ್ಯಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು. ಅಂಥ ಮೇರು ವ್ಯಕ್ತಿತ್ವದ ಗುರು ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

ದೈಹಿಕವಾಗಿ ಅವರು ನಮ್ಮೂಟ್ಟಿಗೆ ಇಲ್ಲದಿದ್ದರು ಅವರು ಮಾಡಿದ ಕೆಲಸ ಕಾರ್ಯಗಳು, ನೀಡಿದ ಕೊಡುಗೆಗಳು ಸದಾ ಜೀವಂತವಾಗಿರುತ್ತವೆ. ಇದೇ ನಮಗೆ ದಾರಿ ದೀಪ ಎಂದು ಐಷ್‌ ನಿರ್ದೇಶಕಿ ಡಾ. ಪುಷ್ಪಾವತಿ ಗದ್ಗದಿತರಾದರು.

ಐಷ್‌ ಪಾಲಿಗೆ ರತ್ನ :

ಮೈಸೂರಿನ  ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (All India Institute of Speech and Hearing) ಸ್ಥಾಪಕ ನಿರ್ದೇಶಕ ಡಾ. ಎನ್. ರತ್ನ ಅವರು ಭಾರತೀಯ ಭಾಷಾಶಾಸ್ತ್ರ ಮತ್ತು ವಾಕ್ ಶ್ರವಣ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.

ಡಾ. ಎನ್. ರತ್ನ ಅವರು ಭಾಷಾ ತೊಂದರೆಗಳನ್ನು ಪರಿಹರಿಸಲು ಮತ್ತು ಶ್ರವಣ ಸಮಸ್ಯೆಗಳನ್ನು ಪರಿಹರಿಸಲು, ಅಂತರ್ಜಾತೀಯವಾಗಿ ನಡೆಸಿದ ಅಧ್ಯಯನಗಳು ಮತ್ತು ಸಂಶೋಧನೆಗಳ ಮೂಲಕ ಜನಪ್ರಿಯರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ 1966ರಲ್ಲಿ ಸ್ಥಾಪನೆಗೊಂಡಿತು.

ಈ ಸಂಸ್ಥೆ ತೀವ್ರವಾಗಿ ವಾಕ್ ಮತ್ತು ಶ್ರವಣ ವಿಷಯಗಳ ಮೇಲೆ ಸಂಶೋಧನೆ ನಡೆಸುತ್ತಿದ್ದು, ಭಾಷಾಶಾಸ್ತ್ರ ಮತ್ತು ಆಡಿಯೋಲಜಿ (Audiology) ಕ್ಷೇತ್ರದಲ್ಲಿ ಶ್ರೇಷ್ಠ ಶಿಕ್ಷಣ ನೀಡಲು ಹೆಸರಾಗಿದೆ. ಡಾ. ಎನ್. ರತ್ನ ಅವರು ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ಅದರ ಬೆಳವಣಿಗೆಗೆ ಮಹತ್ತರವಾದ ಕೊಡುಗೆ ನೀಡಿದರು.

ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಹಲವಾರು ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ, ಉದಾಹರಣೆಗೆ ಶ್ರವಣ ಯಂತ್ರಗಳು ಮತ್ತು ವಾಕ್ ಪುನರ್ವಸತಿ ಸಾಧನಗಳು.

ಡಾ. ರತ್ನ ಅವರ ವಿಜ್ಞಾನ ಕ್ಷೇತ್ರದ ಸಾಧನೆಗಳು, ಸಂಶೋಧನೆಗಳ ತಳಹದಿಯಲ್ಲಿ ಭಾರತೀಯ ಭಾಷಾಶಾಸ್ತ್ರದ ಅಧ್ಯಯನ ಮತ್ತು ಉಪಚಾರಣೆಯು ಅಪಾರವಾದ ಮುನ್ನಡೆಯನ್ನು ಸಾಧಿಸಿದೆ.

key words:  The great personality, ‘Guru’ Dr. N. Ratna, AIISH Director. Dr. Pushpavathi

SUMMARY: 

Among the many gurus who teach the contents of the text, there are very few teachers who teach extra-curricular subjects. This is a rare occurrence of our guru, N. Ratna Sir.

He is the founder director of the All-India Institute of Speech and Hearing, Mysuru. N. Ratna has made important contributions in the field of Indian linguistics and speech and hearing science.

Dr. N. Ratna is popular for her studies and research conducted endogenously to solve language difficulties and hearing problems. Under his guidance, the All-India Institute of Speech and Hearing was established in 1966.